ಜಿಲ್ಲಾ ಮಟ್ಟದ ಚೆಸ್ ಚಾಂಪಿಯನ್‌ಶಿಪ್ ಸ್ಪರ್ಧೆ

0
District Level Chess Championship Competition
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಜಿಲ್ಲಾ ಮಟ್ಟದ ಚೆಸ್ ಅಸೋಶಿಯೇಶನ್‌ನಿಂದ ಜುಲೈ 7ರಂದು ಲಕ್ಷ್ಮೇಶ್ವರದಲ್ಲಿ ಗದಗ ಜಿಲ್ಲಾ ಮಟ್ಟದ ಚೆಸ್ ಚಾಂಪಿಯನ್‌ಶಿಪ್ ಸ್ಫರ್ಧೆ ಏರ್ಪಡಿಸಲಾಗಿದೆ ಎಂದು ಅಸೋಷಿಯೇಶನ್ ಅಧ್ಯಕ್ಷ ಗಿರೀಶ ಎಂ.ಅಗಡಿ ತಿಳಿಸಿದರು.

Advertisement

ಈ ಕುರಿತು ನಡೆದ ಸಬೆಯಲ್ಲಿ ಮಾಹಿತಿ ನೀಡಿದ ಅವರು, ಈ ಚಾಂಪಿಯನ್‌ಶಿಪ್‌ನ್ನು ವಿಭಾಗವಾರು 12-14-16 ವರ್ಷದೊಳಗಿನ ಮಕ್ಕಳಿಗೆ ಏರ್ಪಡಿಸಲಾಗಿದೆ. ಬಾಲಕ ಮತ್ತು ಬಾಲಕಿರಿಗಾಗಿ ಪ್ರತ್ಯೇಕ ಪ್ರಶಸ್ತಿಯನ್ನು ನೀಡಲಾಗುವುದು. ಶ್ರೇಷ್ಠ ಆಟ ಆಡಿದವರನ್ನು ರಾಜ್ಯಮಟ್ಟದ ಚಾಂಪಿಯನ್‌ಶಿಪ್‌ಗೆ ಆಯ್ಕೆ ಮಾಡಲಾಗುವುದು. ಈ ಪಂದ್ಯಾವಳಿಯ ಲಾಭವನ್ನು ಗದಗ ಜಿಲ್ಲೆಯ ಎಲ್ಲ ಚೆಸ್ ಆಟಗಾರರು ಪಡೆದುಕೊಳ್ಳಬೇಕು. ಪ್ರವೇಶ ಫೀ 200 ರೂ ಇರುತ್ತದೆ. ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು.

ಕ್ರೀಡಾಪಟುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯಿದೆ. ಹೆಚ್ಚಿನ ಮಾಹಿತಿಗಾಗಿ ಎಂ.ಆಯ್. ಕಣಕೆ -9945859815 ಇವರನ್ನು ಸಂಪರ್ಕಿಸಬೇಕು ಎಂದರು.

ಈ ವೇಳೆ ಸಂಸ್ಥೆಯ ಗೌರವಾಧ್ಯಕ್ಷ ರಾಮರಾವ್ ವೆರ್ಣೇಕರ್, ಎಸ್.ಎಮ್. ಉಮ್ಮಣ್ಣವರ, ಶ್ರೀಕಾಂತ ಪೂಜಾರ, ಮಂಜುನಾಥ ಅಂಗಡಿ, ಆರ್.ಏ. ಮುಲ್ಲಾ, ಎ.ಜಿ. ಬೂದಿಹಾಳ, ಆದೇಶ ಹುಲಗೂರ, ಚಂದ್ರಶೇಖರ್ ದೊಡ್ಮನಿ, ಶಿವಯ್ಯ ಕುಲಕರ್ಣಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here