ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ದಕ್ಷಿಣಕಾಶಿ ಶ್ರೀ ಕಾಲಕಾಲೇಶ್ವರ ದೇವಸ್ಥಾನದ ಗುಡ್ಡದ ಹಚ್ಚಹಸಿರಿನ ಮಡಿಲಲ್ಲಿ ಗಜೇಂದ್ರಗಡದ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜು, ಅಥರ್ವ ನವೋದಯ ಕೋಚಿಂಗ್ ಸೆಂಟರ್ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಯೋಗಾಸನ ಪ್ರದರ್ಶನ ಮಾಡಿದರು.
ಜಕ್ಕಲಿ ಗ್ರಾಮದ ಎಂ.ಸಿ.ಎಸ್. ಶಾಲೆಯ ಸಹಶಿಕ್ಷಕ ಹಾಗೂ ಯೋಗಪಟು ವಿ.ಎ. ಕುಂಬಾರ ಮಾತನಾಡಿ, ಸಕಾರಾತ್ಮಕ ಆಲೋಚನೆ, ಸರಿಯಾದ ಆಹಾರ ಕ್ರಮ ಮತ್ತು ಯೋಗದ ಜೀವನ ಶೈಲಿ ರೂಢಿಸಿಕೊಂಡರೆ ಸಧೃಡ ಮನಸ್ಸು ಮತ್ತು ಆರೋಗ್ಯಕರ ದೇಹ ಹೊಂದಲು ಸಾಧ್ಯ ಎಂದರು.
ಪಿಯು ಪ್ರಾಚಾರ್ಯ ವಸಂತರಾವ್ ಗಾರಗಿ ಮಾತನಾಡಿ, ಇಂದಿನ ಧಾವಂತದ, ಒತ್ತಡದ ಕಾಲದಲ್ಲಿ ಮನುಷ್ಯನ ಮನಸ್ಸು ವಿಕಾರ ಆಗುತ್ತಿದೆ, ಖಿನ್ನತೆಗೆ ಒಳಗಾಗುತ್ತಿದೆ. ಸಮಾಜ ಘಾತುಕ ಶಕ್ತಿಗಳು ಕೂಡ ಹೆಚ್ಚುತ್ತಿವೆ. ಇಂತಹ ಹೊತ್ತಲ್ಲಿ ದೇಹ, ಮನಸ್ಸನ್ನು ಅರಿಯಲು ಯೋಗದಿಂದ ಮಾತ್ರ ಸಾಧ್ಯ ಎಂದರು
ಇದೇ ವೇಳೆ ಶ್ರೀ ಕಾಲಕಾಲೇಶ್ವರ ದೇವಸ್ಥಾನ ಧರ್ಮದರ್ಶಿಗಳಾದ ಮಂಗಳಾದೇವಿ ದೇಶಮುಖ್, ಗುಡಗೇರಿಯ ಸೇವಾ ನಿವೃತ್ತ ಸೈನಿಕ ಶೇಖಪ್ಪ ಎಂ, ಸಮಾಜ ಸೇವಕ ರವಿ ಗಡೇದ, ಅಥರ್ವ ಶಿಕ್ಷಣ ಸಂಸ್ಥೆಯ ಮಂಜುನಾಥ ರಾಠೋಡ, ಪಿಯು ಪ್ರಾಚಾರ್ಯ ವಸಂತ ಗಾರಗಿ, ಯೋಗ ಪಟು ವಿ.ಎ. ಕುಂಬಾರ ಅವರಿಗೆ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಅರ್ಚಕ ಮಲ್ಲಯ್ಯ ಪೂಜಾರ, ಮೃತ್ಯುಂಜಯ ಹಿರೇಮಠ, ಪರಶುರಾಮ ಚಿಲಝರಿ, ಬಸವರಾಜ ಹುಚ್ಚಯ್ಯನಮಠ, ಡಿ.ಜಿ. ತಾಳಿಕೋಟಿ, ವೀರೇಶ ರಾಠೋಡ, ಆನಂದ ಭಾಂಡಗೆ, ಮಲ್ಲಯ್ಯ ಭಿಕ್ಷಾವತಿಮಠ, ಬಸಣ್ಣ ಹೊಗರಿ, ಗೋಪಾಲ ರಾಯಬಾಗಿ, ರವಿ ಹಲಗಿ, ಪ್ರತಿಭಾ ಲಕ್ಷಕೊಪ್ಪದ, ಸಂಗೀತಾ ನಾಲತವಾಡ, ಸಂಗಮೇಶ ವಸ್ತçದ, ವಿಜಯಲಕ್ಷ್ಮಿ ಅರಳಿಕಟ್ಟಿ, ಪ್ರೀತಿ ಹೊಂಬಳ, ಎ.ಡಿ. ಜಾತಗೇರ, ಪ್ರಶಾಂತ ಗಾಳಪೂಜಿಮಠ, ಮನೋಜ ವೈ.ಕಲಾಲ, ಶಿವಾನಂದ ಹಳ್ಳದ ಇದ್ದರು.
ಹಿರಿಯರಾದ ಶಶಿಧರ್ ಹೂಗಾರ ಮತ್ತು ಸಮಾಜ ಸೇವಕ ರವಿ ಗಡೇದ ಮಾತನಾಡಿ, ಯೋಗ ಎನ್ನುವುದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿತ್ಯದ ದಿನಚರಿಯನ್ನು ಯೋಗ, ಧ್ಯಾನದಿಂದ ಆರಂಭಿಸುವುದರಿAದ ಆರೋಗ್ಯ ಹಾಗೂ ಮನಸ್ಸು ಹತೋಟಿಯಲ್ಲಿ ಇರುತ್ತದೆ ಎಂದರು.