ವಿಜಯಸಾಕ್ಷಿ ಸುದ್ದಿ, ಗದಗ : ಪತಂಜಲಿ ಯೋಗ ಮಂದಿರದಲ್ಲಿ ಜರುಗಿದ ಸಂಸ್ಕೃತ ಸಂಭಾಷಣಾ ಶಿಬಿರದಲ್ಲಿ 20ಕ್ಕೂ ಹೆಚ್ಚು ಕಲಿಕಾಸಕ್ತರು ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದ ಮುಖ್ಯ ಅತಿಥಿಗಳಾದ ವಿಜಯ ಕಲಾಮಂದಿರ ಕಾಲೇಜಿನ ಉಪಾಧ್ಯಕ್ಷ ಸಂತೋಷ ಅಕ್ಕಿ, ಸಂಸ್ಕೃತ ಭಾರತೀ ರಾಜ್ಯ ಸಂಘಟಕ ಲಕ್ಷ್ಮಿನಾರಾಯಣ ಜಿ ಶಿಬಿರದ ಕುರಿತು ಮಾತನಾಡಿದರು.
ಶಿಬಿರದಲ್ಲಿ ಸಂಸ್ಕೃತ ಶಿಕ್ಷಕರಾದ ಗಣಪತಿ ಗಾವಂಕರ, ಸಂಸ್ಕೃತ ಭಾರತೀ ಜಿಲ್ಲಾ ಸಂಯೋಜಕ ಶಿವಮೂರ್ತೆಪ್ಪ ಸಿಂಪಗೇರ, ಶಿಬಿರದ ಶಿಕ್ಷಕ ಕಿರಣಕುಮಾರ ಅರಳಿಕಟ್ಟಿ ಮತ್ತು ಸಂಸ್ಕೃತ ಭಾರತೀ ಪ್ರಮುಖರಾದ ಗಣೇಶ ಸವಣೂರು, ಶಿಬಿರ ಸಂಯೋಜಕ ಮೌನೇಶ್ ಭಜಂತ್ರಿ ಶಿಬಿರದಲ್ಲಿ ಪಾಲ್ಗೊಂಡ ಗಣ್ಯಮಾನ್ಯರು ಹಾಗೂ ಕಲಿಕಾಸಕ್ತರಿಗೆ ಧನ್ಯವಾದಗಳು ತಿಳಿಸಿದರು.
ಹತ್ತು ದಿನಗಳ ಕಾಲ ಸಂಸ್ಕೃತವನ್ನು ಕಲಿತ ಬಸವಣ್ಣೆಪ್ಪ ಹರ್ತಿ, ವಸಂತ ಹಲಿಗಿ, ಜಯಶ್ರೀ, ಮಾಲಾ ಭಗಿನಿ, ಶಶಿರೇಖಾ, ರೇಖಾ, ಸಾಗರ ಭಜಂತ್ರಿ, ಗಂಗಾಧರಯ್ಯ, ರೇಣುಕಾ, ಮಂಜು ದೇಸಾಯಿ, ಕಸ್ತೂರಿ, ಕಬಾಡಿ, ವಿಹಾನ ಕೊಪ್ಪರ ಮುಂತಾದವರು ಶಿಬಿರದ ಬಗ್ಗೆ ತಮ್ಮ ಅನುಭವವನ್ನು ತಿಳಿಸಿದರು.