ವಿಜಯಸಾಕ್ಷಿ ಸುದ್ದಿ, ಮುಳಗುಂದ : ಹುಬ್ಬಳ್ಳಿಯ ಅಂಜಲಿ ಹತ್ಯೆ ಆರೋಪಿಯಿಂದ ಹಲ್ಲೆಗೊಳಗಾದ ಮುಳಗುಂದ ಪಟ್ಟಣದ ಲಕ್ಷ್ಮಿ ಮಾಹಾಂತಪ್ಪ ಸೊರಟೂರ ಕುಟುಂಬಕ್ಕೆ ಮುಳಗುಂದ ಮಹಿಳಾ ಸಂಘಟನೆಯಿಂದ 21 ಸಾವಿರ ರೂ ಮೊತ್ತದ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ಮಾತಾ ಜಿಜಾಬಾಯಿ ಸಂಘಟನೆ ಅಧ್ಯಕ್ಷೆ ಗೀತಾ ಜಾಧಾವ ಮಾತನಾಡಿ, ಲಕ್ಷ್ಮಿ ಕುಟುಂಬ ಕಡು ಬಡತನದಿಂದ ಜೀವನ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಹಲ್ಲೆಗೊಳಗಾಗಿ ಸಾಲ-ಸೋಲ ಮಾಡಿ ಚಿಕಿತ್ಸೆ ಪಡೆದಿದ್ದಾರೆ. ಇದರಿಂದ ಬದುಕು ಕಟ್ಟಿಕೊಳ್ಳುವುದು ದುಸ್ತರವಾಗಿದ್ದನ್ನು ಮಹಿಳಾ ಸಂಘಟನೆ ಮನಗಂಡು, ಸಾಧ್ಯವಾದ ನೆರವು ನೀಡಿದ್ದೇವೆ ಎಂದರು.
ಪ.ಪಂ ಸದಸ್ಯ ಎಸ್.ಸಿ. ಬಡ್ನಿ, ಕೆ.ಎಲ್. ಕರಿಗೌಡರ, ಪ್ರಕಾಶ ಮದ್ದಿನ, ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೆದ, ಅಕ್ಕಮ್ಮಾ ನೀಲಗುಂದ, ರೇಣುಕಾ ಜಾಧಾವ, ಶಾಂತವ್ವ ಹಿರೇಮಠ, ಅನಸವ್ವ ಆರೇರ, ಶೈಲಾ ಆರೇರ, ಯಲ್ಲಮ್ಮ ಮರಾಠಿ, ನಿರ್ಮಲಾ ಜಾಧಾವ, ಲಕ್ಷ್ಮಿ ಜಾಧಾವ, ರೇಣುಕಾ ಜಾಧಾವ ಹಾಗೂ ಲಕ್ಷಿö್ಮ ಕುಟುಂಬದ ಸದಸ್ಯರು ಇದ್ದರು.