ವಿಜಯಸಾಕ್ಷಿ ಸುದ್ದಿ, ಗದಗ : ಬೆಟಗೇರಿಯ ಮಹೇಶ ಗದಗಿನ (ಕರಿಬಿಷ್ಠಿ) ಇವರ ಸ್ನೇಹಿತರ ಬಳಗದ ವತಿಯಿಂದ ರೋಣದ ಸರಕಾರಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಬೂದಪ್ಪ ಶರಣಪ್ಪ ಮಾನೇದ ಇವರ ಸೇವಾ ನಿವೃತ್ತಿ ನಿಮಿತ್ತ ಸನ್ಮಾನಿಸಲಾಯಿತು.
ಇವರ ಸೇವೆಯನ್ನು ಮೆಚ್ಚಿ ಬೆಟಗೇರಿಯ ವಿವಿಧ ಓಣಿಯ ಗುರು-ಹಿರಿಯರು ಸೇರಿ ಬಿ. ಎಸ್. ಮಾನೇದ ದಂಪತಿಗಳಿಗೆ ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
ಅಧ್ಯಕ್ಷತೆಯನ್ನು ವೀರ ರಾಣಿ ಕಿತ್ತೂರು ಚನ್ನಮ್ಮ ಸೇವಾ ಸಮಿತಿಯ ಅಧ್ಯಕ್ಷ ಮಹೇಶ ಕರಿಬಿಷ್ಠಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಜ್ಜನಗೌಡ್ರ ಹಿರೇಮನಿಪಾಟೀಲ, ಎಂ.ಎಸ್. ಮಲ್ಲಾಪೂರ, ಸಿ.ಎಂ. ಮಾರನಬಸರಿ ಪಾಲ್ಗೊಂಡಿದ್ದರು.
ಸನ್ಮಾನಿತರ ಪರಿಚಯವನ್ನು ಸಿ.ಎಂ. ಮಾರನಬಸರಿ ನೆರವೇರಿಸಿದರು. ಕೆ.ಬಿ. ಹೆಳವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರವಿ ಚಿಕ್ಕಣ್ಣವರ ಕಾರ್ಯಕ್ರಮ ನಿರೂಪಿಸಿದರು. ಪ್ರಾರ್ಥನಾ ಗೀತೆಯನ್ನು ಶಿಲ್ಪಾ ಹೆಳವಿ ಹಾಡಿದರು. ನಿಂಗಪ್ಪ ಅಣ್ಣಿಗೇರಿವಂದಿಸಿದರು. ಕಾರ್ಯಕ್ರಮದಲ್ಲಿ ಈರಣ್ಣ ಮಾನೇದ, ಅಂದಪ್ಪ ಮುಳ್ಳಾಳ, ಈಶಪ್ಪ ಚಿಕ್ಕಣ್ಣವರ, ಶಿವಣ್ಣ ನಾಗರಾಳ, ಗುರುಲಿಂಗಪ್ಪ ಕರಿಬಿಷ್ಠಿ ಸಂತೋಷ ಖಾನಾಪೂರ, ಮುದಕಪ್ಪ ಹೊಳಿ ಮುಂತಾದವರು ಉಪಸ್ಥಿತರಿದ್ದರು.


