ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ. ಪಂಚಾಕ್ಷರ ಗವಾಯಿಗಳವರ 80ನೇ ಹಾಗೂ ಪಂ.ಪುಟ್ಟರಾಜ ಕವಿಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಪಂ. ಪುಟ್ಟರಾಜ ಕವಿ ಗವಾಯಿಗಳವರು ರಚಿಸಿದ ಶ್ರೀ ಗುರು ವಚನ ಪ್ರಭ, ಶ್ರೀ ಮಹಾದೇವಿ ಪುರಾಣಂ ಗ್ರಂಥಗಳನ್ನು ಹಾಗೂ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಸಾಹಿತ್ಯ ರಚಿಸಿದ ಶಿವಯೋಗಿ ಸಂತ ಪುಟ್ಟಯ್ಯಜ್ಜ ಧ್ವನಿ ಸುರುಳಿಯನ್ನು ಕಾಶಿ ಪೀಠದ ಪೂಜ್ಯ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾಗಳವರು ಲೋಕಾರ್ಪಣೆಗೊಳಿಸಿದರು.