ವಿಜಯಸಾಕ್ಷಿ ಸುದ್ದಿ, ರೋಣ : ಸ್ವಾಭಿಮಾನಿ ಕರ್ನಾಟಕ ರಕ್ಷಣಾ ಉತ್ತರ ಕರ್ನಾಟಕ ಅಧ್ಯಕ್ಷ ಎಂ.ಎ. ಕುರ್ತಕೋಟಿ, ರೋಣ ತಾಲೂಕಾಧ್ಯಕ್ಷ ಎಂ.ಎಚ್. ನದಾಫ್ ಅವರ ನೇತೃತ್ವದಲ್ಲಿ ಹೊಳೆಆಲೂರಿನ ಪ್ರವಾಸಿ ಮಂದಿರದಲ್ಲಿ ಹೊಳೆಆಲೂರ ಗ್ರಾಮ ಘಟಕ, ವಿದ್ಯಾರ್ಥಿ ಘಟಕ, ತಾಲೂಕಾ ಮತ್ತು ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ನೇಮಕದ ಆದೇಶಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಯಚ್ಚರೇಶ್ವರ ಮಹಾಸ್ವಾಮೀಜಿ, ಸಂಘಟನೆಯನ್ನು ಬಲಿಷ್ಠಗೊಳಿಸಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮುಖಾಂತರ ಜನರಿಗೆ ನ್ಯಾಯ ಕೊಡಿಸುವ ಭರವಸೆಯನ್ನು ಮೂಡಿಸಬೇಕು ಎಂದು ಹೇಳಿದರು.
ಉತ್ತರ ಕರ್ನಾಟಕ ಗೌರವಾಧ್ಯಕ್ಷ ಶ್ರೀ ದಿವಾನ್ ಶರೀಫ್ ಶ್ರೀಮುರುಗೇಂದ್ರ ಸ್ವಾಮೀಜಿ ಶಾಂತಿಧಾಮ, ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರ್ತುಜಾಗೌಂಡಿ, ರೋಣ ತಾಲೂಕು ಉಪಾಧ್ಯಕ್ಷ ಬಸವರಾಜ ಹಾದಿಮನಿ, ರೋಣ ತಾಲೂಕಾ ಪ್ರಧಾನ ಕಾರ್ಯದರ್ಶಿಯಾಗಿ ಲಿಯಾಕತ್ ಅಂಗಡಿಗೇರಿ, ರೋಣ ತಾಲೂಕಾ ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಸಂಕೇತ ದಾನರೆಡ್ಡಿ, ನೂತನ ವಿದ್ಯಾರ್ಥಿ ಘಟಕ ಅಧ್ಯಕ್ಷ ಬಾಬು ಮುಲ್ಲಾ, ಉಪಾಧ್ಯಕ್ಷ ಶರೀಫ ನದಾಫ, ಪ್ರಧಾನ ಕಾರ್ಯದರ್ಶಿ ಸಂತೋಷ ರಾಜಪುರೋಹಿತ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಂಜು ಮಾದರ್, ಉಪಾಧ್ಯಕ್ಷ ಕಾರ್ತಿಕ್ ಬಡಿಗೇರ್, ಊರಿನ ಮುಖಂಡರಾದ ವಾಸುದೇವ್ ಪವಾರ್, ಮೋತಿಲಾಲ್ ರಾವಲ್, ಮೌಲಾನ ಅಬ್ದುಲ್ ಲತೀಫ್, ಯಮನೂರ್ ನದಾಫ್, ಎಂ.ಎಸ್. ಬಹಾದೂರಖಾನ, ನಿಖಿಲ್ ಕಡೇಮನಿ, ಹನುಮಂತ್ ಹಳ್ಳಿಕೇರಿ, ಖಾಜಾ ಜಕ್ಕಲಿ, ಅರುಣ್ ಪೂಜಾರ್ ಮೈಬು ನದಾಫ್, ರಂಗಪ್ಪ ಬಾರಕೇರ, ಹನುಮಂತ್, ಪೀರಸಾಬ ನದಾಫ, ದೇವರಾಜ ಅಂಬಿಗೇರ ಮಾಬುಸಾಬ್ ಚಾಚಾ, ಪ್ರಕಾಶ್, ಅಡಿವೆಪ್ಪ ಮುಂತಾದವರು ಉಪಸ್ಥಿತರಿದರು.