ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಲ್ಲಿನ ಶಿಗ್ಲಿ ನಾಕಾ ಬಳಿ ಇರುವ ಶ್ರೀ ಹನುಮಂತ ದೇವರ ದೇವಸ್ಥಾನವು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಭಕ್ತ ಮಂಡಳಿಯವರು ಸೇರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದಾರೆ. ಬುಧವಾರ ದೇವಸ್ಥಾನದ ನೂತನ ಕಟ್ಟಡ ಕಾಮಗಾರಿಗೆ ಪಟ್ಟಣದ ಕರೇವಾಡಿಮಠದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯರಿಗೆ ಮನಃಶಾಂತಿ ಲಭಿಸಲು ದೇವಸ್ಥಾನಗಳ ಅವಶ್ಯಕತೆಯಿದ್ದು, ಅವುಗಳ ಸಾಕಾರಕ್ಕಾಗಿ ಪ್ರತಿಯೊಬ್ಬರ ಸಹಕಾರ ಅವಶ್ಯವಾಗಿದೆ. ದೇವಸ್ಥಾನಗಳು ನಮ್ಮ ಸಂಸ್ಕೃತಿ-ಸಂಪ್ರದಾಯಗಳ ಪ್ರತೀಕವಾಗಿದ್ದು, ಅವುಗಳನ್ನು ಉಳಿಸಿಕೊಂಡು ಹೋಗುವದರ ಜೊತೆಗೆ ಮುಂದಿನ ಪೀಳಿಗೆಗೆ ದೇವಸ್ಥಾನಗಳ ಮಹತ್ವ ತಿಳಿಸುವ ಕಾರ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಹನುಮಂತದೇವರ ದೇವಸ್ಥಾನ ಮರುನಿರ್ಮಾಣ ಕಾರ್ಯಕ್ಕೆ ಭಕ್ತವೃಂದ ವಿಶೇಷ ಆಸಕ್ತಿಯಿಂದ ಮುಂದಾಗಿದ್ದು ಉತ್ತಮ ಕಾರ್ಯವಾಗಿದೆ. ದೇವಸ್ಥಾನದ ನಿರ್ಮಾಣದಲ್ಲಿ ಸರಕಾರದಿಂದ ದೊರೆಯುವ ಅನುದಾನವನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಭೆಯಲ್ಲಿ ಮುಖಂಡರಾದ ಜಿ.ಎಸ್. ಗಡ್ಡದೇವರಮಠ, ಸುನೀಲ ಮಹಾಂತಶೆಟ್ಟರ, ಗುರುನಾಥ ದಾನಪ್ಪನವರ, ಚನ್ನಪ್ಪ ಜಗಲಿ, ನಿಂಗಪ್ಪ ಬನ್ನಿ, ನವೀನ ಬೆಳ್ಳಟ್ಟಿ, ತಿಪ್ಪಣ್ಣ ಸಂಶಿ, ನಾಗರಾಜ ಮಡಿವಾಳರ, ಪೂರ್ಣಾಜಿ ಖರಾಟೆ, ಎನ್.ಆರ್.ಸಾತಪೂತೆ, ಸಂಗಮೇಶ ಬೆಳವಲಕೊಪ್ಪ, ಫಕ್ಕೀರೇಶ ಮ್ಯಾಟಣ್ಣವರ, ಹೊಳಲಪ್ಪಗೌಡ ಪಾಟೀಲ, ಜಗದೀಶ ಪಿಳ್ಳಿ, ಶಿವಪ್ಪ ಬಸಾಪೂರ, ರಾಮಣ್ಣ ಬಳಗಾನೂರ, ಮಂಜುನಾಥ ಸಾತಪೂತೆ, ಸತೀಶ ಖರಾಟೆ, ಗಿರೀಶ ಕಲ್ಮಠ, ಸೋಮಣ್ಣ ಬಸಾಪೂರ, ನೀಲಪ್ಪ ಬಸಾಪೂರ, ಮುತ್ತಣ್ಣ ಕಟಗಿ ಸೇರಿದಂತೆ ಅನೇಕರಿದ್ದರು.