ವಿಜಯಸಾಕ್ಷಿ ಸುದ್ದಿ, ಗದಗ : ಕೇಸರಿ ನಂದನ ಸಿನಿ ಕ್ರಿಯೇಶನ್ಸ್ರವರ ಹೆಮ್ಮೆಯ ದ್ವಿತೀಯ ಕಾಣಿಕೆ ನವನೀತ ಲಕ್ಷ್ಮಿ ನಿರ್ಮಾಣದ ದೀಪಕ ಎಸ್. ನಿರ್ದೇಶನದ ಉತ್ತರ ಕರ್ನಾಟಕದ ಹಾಸ್ಯ ಕಲಾವಿದರಾದ ರಾಜು ತಾಳಿಕೋಟಿಯವರ ಪುತ್ರ ಭರತರಾಜ ತಾಳಿಕೋಟಿ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ `ವಿಕ್ಕಿ’ ಚಲನಚಿತ್ರದ ಪೋಸ್ಟರ್‌ನ್ನು ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಕಲ್ಲಯ್ಯಜ್ಜನವರು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಜು ತಾಳಿಕೋಟಿ ಮಾತನಾಡಿ, ನನ್ನ ಮಗ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರವಾಗಿದೆ. ನನ್ನ ಮಗನ ಮೇಲೆಯೂ ಕೂಡಾ ಅದೇ ಪ್ರೀತಿ ಇರಲಿ. ನಮ್ಮ ಉತ್ತರ ಕರ್ನಾಟಕದ ಜನ ಹರಸಿ ಹಾರೈಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರೇಮಾ ತಾಳಿಕೋಟಿ, ಎಫ್.ವ್ಹಿ. ಮರಿಗೌಡ್ರ, ಪ್ರಭಯ್ಯ ಹಿರೇಮಠ, ಸಾಹಿಲ್ ನವಲಗುಂದ, ಮಂಜುನಾಥ ಗುಳೇದಗುಡ್ಡ ಹಾಗೂ ಕಲಾವಿದರು ಉಪಸ್ಥಿತರಿದ್ದರು.