ವಿಜಯಸಾಕ್ಷಿ ಸುದ್ದಿ, ಧಾರವಾಡ : ಉನ್ನತ ಭಾರತ ಅಭಿಯಾನ ಕೋಶ, ಸಮಾಜಕಾರ್ಯ ವಿಭಾಗ ಕ.ವಿ.ವಿ ಹಾಗೂ ಅವಸರ್ ಫೌಂಡೇಶನ್ ಟ್ರಸ್ಟ್ ಬೆಂಗಳೂರು ಇವರ ಜಂಟಿ ಸಹಯೋಗದಲ್ಲಿ ನಗರದ ಕರ್ನಾಟಕ ವಿಶ್ವವಿದ್ಯಾಲಯದ ವೇಮನ ಪೀಠದಲ್ಲಿ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಉ.ಭಾ.ಅ ಅಡಿಯಲ್ಲಿ ಕವಿವಿ ದತ್ತು ಪಡೆದಿರುವ ಕಲಘಟಗಿ ತಾಲೂಕಿನ ಧುಮ್ಮವಾಡ, ಕುರುವಿನಕೊಪ್ಪ, ಗಂಭ್ಯಾಪುರ, ಜೋಡಳ್ಳಿ ಗ್ರಾಮಗಳಲ್ಲಿ 2024ನೇ ಸಾಲಿನ PUC-1 ಪರೀಕ್ಷೆಯಲ್ಲಿ ಸಾಧನೆ ಮಾಡಿದ 10 ಜನ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ವಿತರಿಸಲಾಯಿತು.
ಹೆಣ್ಣು ಮಕ್ಕಳಿಗೆ ಶಿಷ್ಯವೇತನ ನೀಡುವುದರಿಂದ ಶೈಕ್ಷಣಿಕವಾಗಿ ಯಶಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಕವಿವಿಯ ಕುಲಸಚಿವರು ಡಾ. ಏ. ಚನ್ನಪ್ಪ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ಸಂಗೀತಾ ಆರ್. ಮಾನೆ ಹಾಗೂ ಅವಸರ್ ಫೌಂಡೇಶನ್ ಟ್ರಸ್ಟಿನ ನಿರ್ದೇಶಕರಾದ ಮಾಳವಿಕಾ ಚತರ್ವೇದಿ ಮಾತನಾಡಿದರು. ಪ್ರತಿಭೆ, ಕೌಶಲ್ಯ ಹಾಗೂ ಜ್ಞಾನ ಇವೆಲ್ಲದರ ಜೊತೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಉನ್ನತ ಭಾರತ ಅಭಿಯಾನ ಕೋಶದ ಸಂಯೋಜಕ ಡಾ. ಚೇತನ ಜೆ.ಡಿ ಹೇಳಿದರು.
ಕಾರ್ಯಕ್ರಮದಲ್ಲಿ ಉನ್ನತ ಭಾರತ ಅಭಿಯಾನ ಕೋಶದ ಮಾಜಿ ಸಂಯೋಜಕರು ಡಾ. ಎನ್. ರಾಮಾಂಜನೇಯಲು, ಡಾ. ಜೆ.ಎಂ. ಚಂದುನವರ, ಕಲ್ಯಾಣ ಚಕ್ರವರ್ತಿ, ಡಾ. ರೇಣುಕಾ. ಅಸಗಿ ಉಪಸ್ಥಿತರಿದ್ದರು.