ಸಾರ್ವಜನಿಕ ಸೇವೆಯಲ್ಲಿ ಶಿಸ್ತು ಮುಖ್ಯ

0
Farewell ceremony for service retirement
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಾರ್ವಜನಿಕ ಸೇವೆಯಲ್ಲಿ ಶಿಸ್ತು, ನಿಷ್ಠೆಗಳು ಪುಣ್ಯವಿದ್ದಂತೆ, ಅಶಿಸ್ತು ಎಂಬುದು ಪಾಪವಿದ್ದಂತೆ. ಈ ಮೊದಲು ಮಾಡಿದ ಪಾಪವನ್ನು ಮಕ್ಕಳು, ಮೊಮ್ಮಕ್ಕಳು ಅನುಭವಿಸುತ್ತಿದ್ದರು, ಇದೀಗ ಮಾಡಿದ ಪಾಪವನ್ನು `ಇಲ್ಲೇ ಆಯ್ಕೆ ಇಲ್ಲೇ ಬಹುಮಾನ’ ರೀತಿಯಲ್ಲಿ ಅವರವರೇ ಅನುಭವಿಸುವಂತಹ ಕಾಲವಿದೆ. ಪ್ರತಿ ಸಾರ್ವಜನಿಕ ಸಿಬ್ಬಂದಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಗದಗ-ಬೆಟಗೇರಿ ನಗರಸಭೆಯ ಮಾನ್ಯ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಕರೆ ನೀಡಿದರು.

Advertisement

ಅವರು ಗದಗ ಬೆಟಗೇರಿ-ನಗರಸಭೆ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘ, ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘಗಳ ಆಶ್ರಯದಲ್ಲಿ ನೀರು ಪೂರೈಕೆ ಕಾರ್ಮಿಕರಾದ ಈರಣ್ಣ ಗುಡಿಸಾಗರ ಅವರ ಸೇವಾ ನಿವೃತ್ತಿ ಪ್ರಯುಕ್ತ ಬೀಳ್ಕೊಡುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಯಾವುದೇ ಸಾರ್ವಜನಿಕ ಸೇವೆಯಲ್ಲಿರುವ ಸಿಬ್ಬಂದಿಯು ಎಂತಹುದೇ ಸಂದರ್ಭದಲ್ಲಿ ಕೂಡಾ ಕಾರ್ಯದೊತ್ತಡ ಹಾಗೂ ವಯಕ್ತಿಕ ಒತ್ತಡಗಳನ್ನು ಸಮವಾಗಿ ನಿಭಾಯಿಸಿದಾಗ ಮಾತ್ರ ಯಶಸ್ವಿಯಾಗಬಲ್ಲರೆಂದು ನಿವೃತ್ತಿವರೆಗೂ ಸೇವೆ ಸಲ್ಲಿಸಿದ ಸಿಬ್ಬಂದಿ ಕುರಿತು ಹರ್ಷ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶ ರಾಮಗಿರಿ, ಕಾರ್ಯಾಲಯದ ವ್ಯವಸ್ಥಾಪಕ ಪರುಶುರಾಮ ಶೇರಖಾನೆ, ಡಿ.ಎಚ್ ನದಾಫ್, ಅನಂತ ಪುಣೇಕರ, ಚಂದ್ರು ಹಾದಿಮನಿ, ಹೇಮೇಶ್ ಯಟ್ಟಿ ಮುಂತಾದವರು ಸಾಂದರ್ಭಿಕವಾಗಿ ಮಾತನಾಡಿ ನಿವೃತ್ತರಿಗೆ ಶುಭ ಹಾರೈಸಿದರು.

ಪೌರಾಯುಕ್ತರು ಸೇವಾ ನಿವೃತ್ತಿ ಹೊಂದಿದ ಈರಣ್ಣ ಆರ್.ಗುಡಿಸಾಗರ ಅವರಿಗೆ ಶಾಲು ಹೊದಿಸಿ, ಫಲ ತಾಂಬೂಲದೊಂದಿಗೆ ಸತ್ಕರಿಸಿ ಗೌರವಿಸಿದರು. ಖ.ಎಚ್. ಸೀತಿಮನಿ ಸ್ವಾಗತಿಸಿದರು, ಸಿದ್ದು ಹುಣಸಿಮರದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಚ್.ಎ. ಬಂಡಿವಡ್ಡರ ಮಾತನಾಡಿ, ನಿವೃತ್ತಿ ಅಥವಾ ಇತರೆ ಕಾರಣಗಳಿಂದ ತೆರವಾಗುವ ಹುದ್ದೆಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದೇ ಇತರೆ ಸಿಬ್ಬಂದಿಯ ಮೇಲೆ ಕಾರ್ಯದೊತ್ತಡ ಹೆಚ್ಚಾಗಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಪರ್ಯಾಯ ವ್ಯವಸ್ಥೆ ಕುರಿತು ಮಾನ್ಯ ಪೌರಾಯುಕ್ತರಲ್ಲಿ ಮನವಿ ಮಾಡುತ್ತಾ, ನಿವೃತ್ತ ನೌಕರರಿಗೆ ಶುಭ ಕೋರಿದರು.


Spread the love

LEAVE A REPLY

Please enter your comment!
Please enter your name here