ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು ಜುಲೈ 14ರ ಸಂಜೆ 4 ಗಂಟೆಗೆ, ಧಾರವಾಡದ ರಂಗಾಯಣದಲ್ಲಿ ಹಮ್ಮಿಕೊಂಡಿರುವ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ ‘ಗುರುಗುಣ ಗಾನ’ ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಸಂಗೀತ, ನೃತ್ಯ ಕಲಾ ಸೇವೆ ಸಲ್ಲಿಸಲು ಆಸಕ್ತ ಸಂಗೀತ ನೃತ್ಯ ಶಾಲೆಯ ಕಲಾ ಗುರುಗಳು, ಕಲಾವಿದರನ್ನು ಆಹ್ವಾನಿಸಿದೆ.
ಈ ಅಪರೂಪದ ಸಮಾರಂಭದಲ್ಲಿ ಭಾಗವಹಿಸಿ ಕಲಾ ಸೇವೆ ಸಲ್ಲಿಸುವ ತಂಡದ ಎಲ್ಲಾ ಸದಸ್ಯರಿಗೆ ಅಭಿನಂದನಾ ಪತ್ರ, ಪುಸ್ತಕ ಕಾಣಿಕೆಯೊಂದಿಗೆ ಗೌರವಿಸಲಾಗುವುದು. ಸಂಗೀತ ನೃತ್ಯ ಶಾಲೆಯ ಗುರುಗಳಿಗೆ ಗಾನಯೋಗಿ ಕೃಪಾ ಸತ್ಕಾರ ನೀಡಿ ಗೌರವಿಸಲಾಗುವುದು.
ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಸಂಗೀತ ಮತ್ತು ನೃತ್ಯ ಶಾಲೆಗಳಿಗೆ ಮಾತ್ರ ಅವಕಾಶವಿರುತ್ತದೆ. ಆಸಕ್ತರು ತಮ್ಮ ಪೂರ್ಣ ಹೆಸರು, ಅಂಚೆ ವಿಳಾಸ ತಿಳಿಸಿ, ಗುಣಮಟ್ಟದ ಒಂದು ಭಾವಚಿತ್ರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕಿ ಡಾ. ಸುಮಾ ಹಡಪದ ಧಾರವಾಡ ಇವರ 91087 40044, 9886717732 ವಾಟ್ಸಾಪ್ ಸಂಖ್ಯೆಗೆ ಕಳಿಸಿಕೊಡಬಹುದು. ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ ಜುಲೈ 10 ಆಗಿದೆ ಎಂದುಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಡಾ. ಸುಮಾ ಹಡಪದ ಹಳಿಯಾಳ ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.