ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ರೋಟರಿ ಐಕೇರ್ ಸೆಂಟರ್‌ನಲ್ಲಿ ರೋಟರಿ ಕ್ಲಬ್ ಗದಗ-ಬೆಟಗೇರಿ, ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿ, ವಿಜಯ ಕಾಲೇಜ್ ಆಫ್ ಫೈನ್ ಆರ್ಟ್ಸ್ ಗದಗ ಹಾಗೂ ಬಸವೇಶ್ವರ ಬ್ಲಡ್ ಸೆಂಟರ್ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ರಾಷ್ಟ್ರೀಯ ವೈದ್ಯರ ದಿನಾಚರಣೆ’ ನಿಮಿತ್ತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಆರ್.ಬಿ. ಉಪ್ಪಿನ ಅಧ್ಯಕ್ಷತೆ ವಹಿಸಿ ಸಂದರ್ಭೋಚಿತವಾಗಿ ಮತನಾಡಿದರು. ವೇದಿಕೆಯ ಮೇಲೆ ರೋಟರಿ ಕ್ಲಬ್‌ನ ಅಸಿಸ್ಟಂಟ್ ಗವರ್ನರ್ ಶಿವಾಚಾರ್ಯ ಹೊಸಳ್ಳಿಮಠ, ಗದಗ-ಬೆಟಗೇರಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂತೋಷ ಅಕ್ಕಿ, ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನ ಮಾರನಬಸರಿ, ವಿಜಯ ಕಾಲೇಜ್ ಆಫ್ ಫೈನ್ ಆರ್ಟ್ಸ್ನ ಪ್ರಾಚಾರ್ಯ ಸಿ.ವ್ಹಿ. ಬಡಿಗೇರ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಗದಗ-ಬೆಟಗೇರಿ ವೇಲ್ಪೇರ್ ಸೊಸೈಟಿಯ ಅಧ್ಯಕ್ಷ ಶ್ರೀಧರ ಸುಲ್ತಾನಪೂರ ಪರಿಚಯಿಸಿದರು. ಕಾರ್ಯದರ್ಶಿ ಸಂತೋಷ ಅಕ್ಕಿ ನಿರೂಪಿಸಿ ವಂದಿಸಿದರು. ಅಶೋಕ ಟಿ.ಅಕ್ಕಿ ಆತಿಥ್ಯ ವಹಿಸಿದ್ದರು. ಶಿಬಿರದಲ್ಲಿ 7 ಜನರು ರಕ್ತದಾನ ಮಾಡಿದರು.
ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನ ಸವಿತಾ ಶ್ರೀಧರ ಧರ್ಮಾಯತ, ಅಶ್ವಿನಿ ಜಗತಾಪ, ನೀಲಾಂಬಿಕಾ ಉಗಲಾಟ, ಜ್ಯೋತಿ ಭರಮಗೌಡರ, ಸುವರ್ಣ ವಸ್ತçದ, ಪುಷ್ಪಾ ಭಂಡಾರಿ, ಹೇಮಾ ಪುಂಗಾಲಿಯಾ, ವೀಣಾ ತಿರ್ಲಾಪೂರ, ಶ್ರೀದೇವಿ, ವಿಶಾಲಾಕ್ಷೀ ಮೂಲಿಮನಿ ಹಿರಿಯ ವೈದ್ಯರಾದ ಡಾ. ರಾಜಶೇಖರ ಬಳ್ಳಾರಿ, ಡಾ. ಶೇಖರ ಸಜ್ಜನರ, ಡಾ. ಪ್ರದೀಪ ಉಗಲಾಟ, ಎಚ್.ಎಸ್. ಪಾಟೀಲ, ವಿಶ್ವನಾಥ ಯಳಮಲಿ, ಶ್ರೀಧರ ಧರ್ಮಾಯತ, ಬಾಲಕೃಷ್ಣ ಕಾಮತ, ಚನ್ನವೀರ ಹುಣಶೀಕಟ್ಟಿ, ಸುರೇಶ ಕುಂಬಾರ ಸೇರಿದಂತೆ ಕ್ಲಬ್ ಸದಸ್ಯರು, ಕಾಲೇಜು ವಿದ್ಯಾರ್ಥಿಗಳಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಜೆ.ಸಿ. ಶಿರೋಳ ಮಾತನಾಡಿ, ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದದ್ದು. ವ್ಯಕ್ತಿಯ ಜೀವವನ್ನು ಉಳಿಸುವಂತಹ ಶಕ್ತಿ ರಕ್ತಕ್ಕಿದೆ. ರಕ್ತಹೀನತೆ, ಗರ್ಭಿಣಿ ಮಹಿಳೆಯರು, ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡವರಿಗೆ ಹಾಗೂ ಇತರ ವೈದ್ಯಕೀಯ ಚಿಕಿತ್ಸೆಗಳ ಸಂದರ್ಭದಲ್ಲಿ ತುರ್ತಾಗಿ ರೋಗಿಯ ರಕ್ತ ಗುಂಪಿನ ರಕ್ತವೇ ಬೇಕಾಗುವದು. ಸಕಾಲಕ್ಕೆ ರಕ್ತ ಲಭ್ಯವಾದರೆ ಮಾತ್ರ ಜೀವ ಉಳಿಯಬಲ್ಲದು. ಕಾರಣ ದಾನಿಗಳು ನೀಡಿದ ರಕ್ತವನ್ನು ರಕ್ತಭಂಡಾರದಲ್ಲಿ ಶೇಖರಿಸಿಟ್ಟು ಸಕಾಲಕ್ಕೆ ಉಪಯೋಗಿಸಲಾಗುವದು ಎಂದರು.



