ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕಾದರೆ ಕಸೂತಿ ತರಬೇತಿಯನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು. ಅಂದಾಗ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಚನ್ನು ಪಾಟೀಲ ಫೌಂಡೇಶನ್‌ನ ಸಂಸ್ಥಾಪಕ ಉಮೇಶ ಚನ್ನು ಪಾಟೀಲ ಹೇಳಿದರು.
ಸ್ಥಳೀಯ ದಿ.ಚನ್ನು ಪಾಟೀಲ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಕಸೂತಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ತರಬೇತಿ ಪಡೆದುಕೊಂಡ ಎಲ್ಲಾ ಮಹಿಳೆಯರು ಸ್ವತಂತ್ರ ಉದ್ದಿಮೆಗಳನ್ನು ಆರಂಭಿಸಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಿದೆ. ಈಗಾಗಲೇ ಸಂಸ್ಥೆಯ ವತಿಯಿಂದ ಹಲವಾರು ತರಬೇತಿ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ಮಹಿಳೆಯರು ಸ್ವಾಲಂಬಿಗಳಾದರೆ, ಆರ್ಥಿಕ ಸ್ಥಿತಿ-ಗತಿಗಳ ಸುಧಾರಣೆ ಜತೆಗೆ ಕುಟುಂಬವನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದ ಅವರು, ಈ ನಿಟ್ಟಿನಲ್ಲಿ ಮಹಿಳೆಯರು ಇಂತಹ ಶಿಬಿರಗಳಲ್ಲಿ ಭಾಗವಹಿಸಿ, ಹೆಚ್ಚಿನ ಜ್ಞಾನ ಪಡೆದು, ಯೋಜನೆಯ ಸದುಪಯೋಗ ಪಡೆಯಲಿ ಎಂದು ಆಶಿಸಿದರು.
ಮಹಿಳೆಯರು ಪುರುಷರಂತೆ ಸಮಾನ ಅವಕಾಶ ಪಡೆದುಕೊಳ್ಳುವಲ್ಲಿ ಮುಂದಾಗಬೇಕು. ಈ ಹಿನ್ನೆಲೆಯಲ್ಲಿ ಮಹಿಳೆಯರು ಶಿಕ್ಷಣ ಪಡೆಯಬೇಕು. ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಕಸೂತಿ ಸಹಕಾರಿ ಎಂದರು.
30ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ವೇಳೆ ವೇದಾ ಪಾಟೀಲ, ಆರತಿ, ಸುಮಾ ಚುರ್ಚಪ್ಪನವರ, ಜ್ಯೋತಿ ಕೋಸಗಿ, ಸ್ನೇಹಾ ರಾಯಬಾಗಿ, ಪ್ರಿಯಾಂಕಾ ಬಡಿಗೇರ ಮುಂತಾದವರು ಇದ್ದರು.



