HomeGadag Newsಕುಮಾರವ್ಯಾಸ ಗುರಿ ಸಾಧನೆಗೆ ಪ್ರೇರಣೆ : ಪ್ರೊ. ಗಣೇಶ ಚಲವಾದಿ

ಕುಮಾರವ್ಯಾಸ ಗುರಿ ಸಾಧನೆಗೆ ಪ್ರೇರಣೆ : ಪ್ರೊ. ಗಣೇಶ ಚಲವಾದಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕುಮಾರವ್ಯಾಸರು ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಕುಳಿತು ಬರೆದ ಗದುಗಿನ ಮಹಾಭಾರತ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ದೊಡ್ಡ ಕೊಡುಗೆ ಎಂದು ಪ್ರೊ. ಗಣೇಶ ಚಲವಾದಿ ಹೇಳಿದರು.

ಅವರು ವಿಜಯ ವಾಣಿಜ್ಯ ಪದವಿಪೂರ್ವ ಕಾಲೇಜುನ ವಿದ್ಯಾರ್ಥಿಗಳಿಗೆ ಗದುಗಿನ ವೀರನಾರಾಯಣ ದೇವಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಇತಿಹಾಸ ಪರಿಚಯಿಸಿ ಮಾತನಾಡಿದರು.

ಗದುಗಿನ ವೀರನಾರಾಯಣ ದೇವಸ್ಥಾನವು ಕ್ರಿ.ಶ 1117 ಸುಮಾರಿನಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಕಟ್ಟಿಸಿದ. ಈ ದೇವಸ್ಥಾನವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ಸುರಕ್ಷಿತ ಸ್ಮಾರಕವಾಗಿದೆ ಎಂದು ತಿಳಿಸಿದರು.

ಕುಮಾರವ್ಯಾಸನ ಅತ್ಯಂತ ಪ್ರಸಿದ್ಧ ಕೃತಿ, ಕರ್ಣಾಟ ಭಾರತ ಕಥಾಮಂಜರಿ ಗದುಗಿನ ಭಾರತ ಮತ್ತು ಕುಮಾರವ್ಯಾಸ ಭಾರತವೆಂದೇ ಪ್ರಸಿದ್ಧವಾಗಿದೆ. ಇದು ಮಹಾಭಾರತದ ಮೊದಲ ಹತ್ತು ಪರ್ವಗಳ(ಅಧ್ಯಾಯಗಳು) ರೂಪಾಂತರವಾಗಿದೆ. ಗದುಗಿನ ಭಾರತವನ್ನು ಭಾಮಿನಿ ಷಟ್ಪದಿಯಲ್ಲಿರಚಿಸಲಾಗಿದೆ ಎಂದರಲ್ಲದೆ, ಕುಮಾರವ್ಯಾಸರ ಜೀವನದ ಅಧ್ಯಯನದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಆಸಕ್ತಿ, ಉಲ್ಲಾಸ ಹಾಗೂ ಗುರಿ ಸಾಧನೆಗೆ ಪ್ರೇರಣೆಯಾಗಬಹುದು ಎಂದರು.

ಈ ಸಂದರ್ಭದಲ್ಲಿ ಪ್ರೊ. ಶ್ರೀದೇವಿ ವಿ.ವಾಯ್., ಪ್ರೊ. ವಿಶಾಲಾಕ್ಷಿ ಮೂಲಿಮನಿ, ಅರುಣ ಹುಲ್ಲೂರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!