ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವೈದ್ಯ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ರೋಗಮುಕ್ತ ಸ್ವಾಸ್ತ್ಯ ಸಮಾಜ ನಿರ್ಮಾಣದ ಮೂಲಕ ವೃತ್ತಿ ಗೌರವ, ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಹೇಳಿದರು.
ಅವರು ಪಟ್ಟಣದ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಸಮುದಾಯ ಭವನದಲ್ಲಿ ಲಕ್ಷ್ಮೇಶ್ವರ/ಶಿರಹಟ್ಟಿ ತಾಲೂಕಾ ವೈದ್ಯರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬದುಕಿನ ಜಂಜಾಟಗಳು, ಒತ್ತಡ, ಸ್ವಾರ್ಥ, ಕೌಟುಂಬಿಕ ಬದುಕಿನ ಕಷ್ಟ-ಸುಖಗಳನ್ನು ಬದಿಗೊತ್ತಿ ವೃತ್ತಿ ಧರ್ಮ ಮೆರೆಯಬೇಕಾಗುತ್ತದೆ. ವೈದ್ಯರಿಲ್ಲದ ಜಗತ್ತು ಊಹಿಸಿಕೊಳ್ಳಲೂ ಭಯವಾಗುತ್ತದೆ. ಅಷೊಂದು ಮಹತ್ವ ವೈದ್ಯ ವೃತ್ತಿಗಿದೆ ಎಂದರು.
ಹುಬ್ಬಳ್ಳಿ ಕೆಎಲ್‌ಇ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವೈ.ಎಫ್. ಹಂಜಿ, ಹಿರಿಯ ವೈದ್ಯರಾದ ಡಾ. ಎಸ್.ಕೆ. ಪೊಲೀಸ್‌ಪಾಟೀಲ, ಡಾ. ಎಸ್.ಜಿ. ಹೂವಿನ ಅವರನ್ನು ಸನ್ಮಾನಿಸಲಾಯಿತು.
ರವಿ ಹುಚ್ಚಣ್ಣವರ ಹಣಕಾಸಿನ ಹೂಡಿಕೆ-ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು. ಈ ವೇಳೆ ತಾಲೂಕಾ ಘಟಕದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಡಾ. ಪಿ.ಡಿ. ತೋಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂಜಿಎಂ ಫೌಂಡೇಶನ್ ಮುಖ್ಯಸ್ಥ ವಿಜಯಕುಮಾರ ಮಾಂತಶೆಟ್ಟರ, ನಿವೃತ್ತ ಡಿವೈಎಪಿ ಬಿ.ಡಿ. ದೊಡ್ಡಮನಿ, ಡಾ. ಎಸ್.ಸಿ. ಮಲ್ಲಾಡದ, ಡಾ. ಎಸ್.ಬಿ. ಗುಡಗೇರಿ, ಡಾ. ಐ.ಎಸ್. ಮಳಗಿ, ಡಾ. ಎಸ್.ಕೆ ಹೆಬ್ಬಳ್ಳಿ, ಡಾ. ಸುನೀಲ ಬುರಬುರೆ, ಡಾ. ಎಂ.ಆರ್. ಕಲಿವಾಳಮಠ, ಡಾ. ಪವನ ಮಹೇಂದ್ರಕರ, ಡಾ. ದೀಪಾ ಬಿಂಕದಕಟ್ಟಿ, ಡಾ. ನಾಗರಾಜ ವಾಲಿ, ಡಾ. ಪ್ರಸನ್ ಕುಲಕರ್ಣಿ, ಡಾ. ವಿಜದತ್ತ ಎಂ, ಡಾ. ಎ.ಎಂ. ಅಮರಶೆಟ್ಟರ ಸೇರಿ ಲಕ್ಷ್ಮೇಶ್ವರ/ಶಿರಹಟ್ಟಿ ತಾಲೂಕಾ ವೈದ್ಯರು ಪಾಲ್ಗೊಂಡಿದ್ದರು.
ಡಾ. ಶರಣಪ್ಪ ಬಿಂಕದಕಟ್ಟಿ, ಡಾ. ವಿನೋದ ಹೊನ್ನಿಕೊಪ್ಪ, ಡಾ.ಸಂಜೀವ ಬೀರಾದಾರ ನಿರ್ವಹಿಸಿದರು.