ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಬಾಲ ವಿನಾಯಕ ವಿದ್ಯಾನಿಕೇತನದ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ನಾಯಕರ ಪದಗ್ರಹಣ ಸಮಾರಂಭದ ಅತಿಥಿಯಾಗಿ ಆಗಮಿಸಿದ ಉತ್ತರಕರ್ನಾಟಕ ವಿಭಾಗದ ಐಜಿ, ಐಪಿಎಸ್. ಅಧಿಕಾರಿ ವಿಕಾಸ ಕುಮಾರ ವಿಕಾಶ ಅವರು ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಶಾಲೆಯಲ್ಲಿ ಕಲ್ಪಿಸಲಾಗುತ್ತಿರುವ ಅವಕಾಶಗಳ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಅವರು, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಆಟದ ಜೊತೆ ಪಾಠಗಳನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಮುಂಬರಲು ಪ್ರಯತ್ನಿಸಬೇಕೆಂದು ಹುರಿದುಂಬಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ನಿರ್ದೇಶಕ ವಿನಾಯಕ ಆರ್, ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಲ್ಲಿರುವ ವಿವಿಧ ಪ್ರತಿಭೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಮಂತ್ರಿ ಮಂಡಲದ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಶಾಲೆಯವರು ನೀಡಿದ ಅವಕಾಶಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಹೊಸದಾಗಿ ಆಯ್ಕೆಯಾದ ಶಾಲಾ ನಾಯಕ ಆದಿತ್ಯ ಅಂಗಡಿ, ನಾಯಕಿ ವೈಷ್ಣವಿ ಮೆಣಸಗಿ, ಉಪ ನಾಯಕ ಶಿವಂ ಬಾರಕೇರ ಮತ್ತು ಉಪ ನಾಯಕಿ ಐಮನ್ ಕೊಪ್ಪಳ ಅವರಿಗೆ ಪ್ರಾಚಾರ್ಯ ವಿ.ಎಂ. ಅಡ್ನೂರ ಪ್ರಮಾಣವಚನ ಬೋಧಿಸಿದರು. ಶಾಲೆಯ ವಿವಿಧ ಮಂತ್ರಿ ಮಂಡಲದ ಸದಸ್ಯರಿಗೆ ಉಪ ಪ್ರಾಚಾರ್ಯ ಪಿ.ಜಿ. ಬ್ಯಾಳಿ ಪ್ರಮಾಣ ವಚನ ಬೋಧಿಸಿದರು.
ಶಾಲಾ ಆಡಳಿತ ಅಧ್ಯಕ್ಷರಾದ ಎಸ್.ರವಿ, ಇ.ಎಲ್.ಸಿಯ ಮುಖ್ಯಸ್ಧರಾದ ಆರ್.ಮಲ್ಲಿಕಾ, ಪ್ಲೇ ಹೋಮ್‌ನ ಮುಖ್ಯಸ್ಧರಾದ ಗಂಗಾ ಮಿಸ್, ಪೊಲೀಸ್ ಸಿಬ್ಬಂದಿ ವರ್ಗ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪಂ.ಪುಟ್ಟರಾಜ ಗವಾಯಿ ಸಂಗೀತ ತಂಡದ ಚಿನ್ಮಯ ಗೌಡರ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಸಂಜಯ ಕುಲಕರ್ಣಿ ಪರಿಚಯಿಸಿದರು. ಸಾಕ್ಷಿ ಮರಿಗೌಡರ ಸ್ವಾಗತಿಸಿದರು. ಶ್ರಾವಣಿ ಅಣ್ಣಿಗೇರಿ, ಅನುಷ್ ಹಿರೇಮಠ ನಿರೂಪಿಸಿದರು.ಮಿಸ್ಬಾ ಕೊಟ್ಟರು ವಂದಿಸಿದಳು.



