ಪ್ರಾ. ಡಾ.ಎಸ್.ಎಫ್. ಸಿದ್ನೇಕೊಪ್ಪರಿಗೆ ಸನ್ಮಾನ ನಾಳೆ

0
Prof. Dr. S.F. Tribute to Sidnekopper tomorrow
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ನಾಗಸಮುದ್ರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಚಾರ್ಯರಾಗಿರುವ ಡಾ. ಎಸ್.ಎಫ್. ಸಿದ್ನೇಕೊಪ್ಪ ಅವರು ನಿವೃತ್ತಿಗೊಂಡ ನಿಮಿತ್ತ ರವಿವಾರ ಬೆಳಿಗ್ಗೆ 11.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ‘ಹೃದಯಸ್ಪರ್ಶಿ’ ಸನ್ಮಾನ ಹಮ್ಮಿಕೊಳ್ಳಲಾಗಿದೆ.

Advertisement

ರಾಜ್ಯದ ಕಾನೂನು, ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಎಚ್.ಕೆ. ಪಾಟೀಲ ಅವರು ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಧಾರವಾಡದ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಪ್ರಕಾಶ ಹೊಸಮನಿ, ನವದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಸಲಹಾ ಮಂಡಳಿಯ ಸದಸ್ಯ ಡಾ. ಆರ್.ಎಂ. ಕುಬೇರಪ್ಪ ಹಾಗೂ ಧಾರವಾಡದ ವಿಶ್ವಚೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸಾಯಿ ಡೆವಲಪರ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಸರ್ ಐ.ಎ. ಪಿಂಜಾರ ಅವರು ಆಗಮಿಸುವರು.

ಕಾಲೇಜು ಅಭಿವೃದ್ಧಿ ಸಮಿತಿಯ ನೂತನ ಸದಸ್ಯರಾದ ಆರ್.ಎಚ್. ಏಕಬೋಟೆ, ಶಂಕರ ರಜಪೂತ, ಮಲ್ಲಿಕಾರ್ಜುನ ಐಲಿ, ಹೊನ್ನಪ್ಪ ಸಾಕಿ, ಡಾ.ದಿವಾಕರ ಪರಕಾಳೆ, ಶಿವಕುಮಾರ ಬೆಟಗೇರಿ, ಅಂಬರೀಷ ಚಾಗಿ, ವಿಜಯ ಕಬಾಡಿ, ಮಹಮ್ಮದ ಶಾಲಗಾರ, ಬಸವರಾಜ ಕಡೇಮನಿ, ಅಶೋಕ ಮಂದಾಲಿ ಹಾಗೂ ಕುಸುಮ ಬೆಳಗಟ್ಟಿ ಅವರಿಗೆ ಇದೇ ಸಂದರ್ಭದಲ್ಲಿ ಸ್ವಾಗತ ಹಾಗೂ ಸನ್ಮಾನ ನಡೆಯಲಿದೆ.

ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಬೋಧಕ/ ಬೋಧಕೇತರ ಸಿಬ್ಬಂದಿ ಉಪಸ್ಥಿತರಿರುವರು ಎಂದು ಕಾಲೇಜಿನ ಹಿರಿಯ ಉಪನ್ಯಾಸಕ ಖಲೀಲ್ ಅಹ್ಮದ್ ಚಿಕ್ಕೇರೂರ, ಸರ್ಕಾರಿ ಪದವಿ ಕಾಲೇಜ ಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನಂತಗೌಡ ಆರ್.ಕಲ್ಮನಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here