ಇನಿಲ್ಲ ಬಹುದಿನ ಈ ನಮ್ಮ ಐಐಃ ಕಾಲೇಜು ಜೀವನ….!

0
This is our college life for a long time....!
Spread the love

ನವ ಬಾಳಿಗೆ ಹೊಸ ನೂತನ
ಅನುರಾಗದ ಸಿಹಿ ಬಂಧನ
ಬದುಕಿನ ಉದ್ದ ಅಗಲಕ್ಕೂ
ಏಳು ಬೀಳಿನ ಪಯಣ
ಅಳಿದರೂ ನೆನಪಾಗಿ ಉಳಿಯಲಿ
ಈ ನಮ್ಮ ಗೆಳೆತನ
ಇನಿಲ್ಲ ಬಹುದಿನ
ಈ ನಮ್ಮ ಐಐಃ ಕಾಲೇಜು ಜೀವನ…..!

Advertisement

ಬಾಳು ಮೂರೇ ದಿನ ಬಾಳ ಜೋಪಾನ
ನಗುವಿನೊಂದಿಗೆ ಸಾಗಲಿ ಈ ಜೀವನವೆಂಬ ಸುಮಧುರ ಪಯಣ
ಪಯಣದ ಹಾದಿಯಲಿ ಅನಿರೀಕ್ಷಿತವಾಗಿ
ಸಂಭವಿಸುವುದು ಮರಣ
ಜನನ-ಮರಣದ ನಡುವೆ ಅಮರವಾಗಲಿ ಈ ನಮ್ಮ ಗೆಳೆತನ
ಇನಿಲ್ಲ ಬಹುದಿನ
ಈ ನಮ್ಮ ಐಐಃ ಕಾಲೇಜು ಜೀವನ….!

ಲಾಸ್ಟ ಬೆಂಚಲ್ಲಿ ಕಳೆದ ಹಲವು ನೆನಪುಗಳ ಚಿತ್ರಣ
ನಾವು ಕಳೆದ ಕಾಲೇಜು ಜೀವನ
ಮತ್ತೆ ಮಾರುಕಳಿಸದು ಆ ತುಂಟತನ
ಕಳೆದ ಕ್ಷಣಗಳನ್ನು ತಿರುಗಿ ನೋಡಿದಾಗ
ಕಣ್ಣಲ್ಲಿ ಕಂಬನಿಯ ಕಂಪನ
ಇನಿಲ್ಲ ಬಹುದಿನ
ಈ ನಮ್ಮ ಐಐಃ ಕಾಲೇಜು ಜೀವನ…..!

ಬಾಳು ಒಂದು ನಂದನ
ಅನುರಾಗದ ಸ್ಪಂದನ
ಇನಿಲ್ಲ ಬಹುದಿನ
ಈ ನಮ್ಮ ಐಐಃ ಕಾಲೇಜು ಜೀವನ
ಭವ್ಯ ಬಂದನಕ್ಕೆ ನನ್ನದೆಯ ಕವನ
ಈ ಸುಂದರ ಸೊಬಗಿಗೆ ನನ್ನದೊಂದು ನಮನ…..!
– ಪಿ.ಜಿ. ಗೊರವನಕೊಳ್ಳ.
(ಹುರಕಡ್ಲಿ ಅಜ್ಜಾ ಲಾ ಕಾಲೇಜು, ಧಾರವಾಡ)


Spread the love

LEAVE A REPLY

Please enter your comment!
Please enter your name here