HomeGadag Newsಮನೋರಮಾ ಕಾಲೇಜಿನ ಬಿಕಾಂ 5ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ

ಮನೋರಮಾ ಕಾಲೇಜಿನ ಬಿಕಾಂ 5ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಮನೋರಮಾ ಮಹಾವಿದ್ಯಾಲಯದ ಶೈಕ್ಷಣಿಕ ಸಾಲಿನ ಬಿಸಿಎ ಕೋರ್ಸಿನ 5ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಚೇತನ ಸಿದ್ದನಗೌಡರ (90.71) ಪ್ರಥಮ ಸ್ಥಾನದೊಂದಿಗೆ ಜಿಎಸ್‌ಟಿ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾನೆ. ಪವನ ಮುದಗಲ್ಲ (90.57) ದ್ವಿತೀಯ ಹಾಗೂ ಕಾಸ್ಟ್ ಅಕೌಂಟ್ ವಿಷಯದಲ್ಲಿ 100ಕ್ಕೆ 100 ಅಂಕ, ಶೃತಿ ಶೇಠ (89.28) ತೃತೀಯ ಸ್ಥಾನ ಹಾಗೂ ಜಿಎಸ್‌ಟಿ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾಳೆ.

ಸುಷ್ಮಾ ಓಸೇಕರ (88.85) ಅಂಕ ಪಡೆದು ನಾಲ್ಕನೇಯ ಸ್ಥಾನ, ಚೆನ್ನಮ್ಮಾ ಹಿರೇಮಠ (87.42) 5ನೇ ಸ್ಥಾನ ಪಡೆದಿದ್ದಾರೆ. ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ, ಸಹ ಸಂಯೋಜಕರಾದ ಪ್ರೊ. ಅಲ್ವಿನಾ ಡಿ ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img