ವಿಜಯಸಾಕ್ಷಿ ಸುದ್ದಿ, ಗದಗ : ಗಾಣಿಗ ಸಮುದಾಯ ಶರಣ ಮತ್ತು ಶ್ರಮ ಸಂಸ್ಕೃತಿಗೆ ಹೆಸರುವಾಸಿ. ರಾಜ್ಯದಲ್ಲಿ ಈ ಸಮುದಾಯಕ್ಕೆ ವಿಶೇಷ ಗೌರವ ಇದೆ. ಗಾಣಿಗ ಸಮಾಜದ ಶ್ರಮದಿಂದ ನಿರ್ಮಾಣಗೊಂಡಿರುವ ಈ ಭವನ ಮಾದರಿಯಾಗಿದೆ. ಇಲ್ಲಿ ಸಂಸ್ಕಾರ ನೀಡುವಂತಹ ಕಾರ್ಯಕ್ರಮಗಳು ನಡೆಯುವ ಮೂಲಕ ಸಾಂಸ್ಕೃತಿಕ ಭವನವಾಗಿ ರೂಪುಗೊಳ್ಳಲಿ ಎಂದು ಸಂಸದ ಬಸವರಾಜ ಬೊಮ್ಮಯಿ ಹೇಳಿದರು.
ಅವರು ರವಿವಾರ ನಗರದ ಗಾಣಿಗ ಸಮುದಾಯ ಭವನದಲ್ಲಿ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್ ಗದಗ ಇವರ ಆಶ್ರಯದಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ, ನೂತನ ಸಂಸದರಿಗೆ ಸನ್ಮಾನ ಹಾಗೂ ಗಾಣಿಗ ಭವನ ಕಟ್ಟಡದ ದಾನಿಗಳಿಗೆ ಸನ್ಮಾನ, ವಾರ್ಷಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಮ್ಮ ಮಕ್ಕಳಿಗೆ ಆಸಕ್ತಿಯಂತೆ ಶಿಕ್ಷಣ ಕೊಡಿಸಿ, ನಮ್ಮ ಪೂರ್ವಜರು ಉಳಿಸಿಕೊಂಡು ಬಂದಿದ್ದ ಸಂಬಂಧಗಳ ಮೌಲ್ಯಗಳು ಇಂದು ನಾಟಕೀಯವಾಗುತ್ತಿರುವುದು ದುರಂತವೇ ಸರಿ. ಇಂದು ಹಣದ ಹಿಂದೆ ಜಗುತ್ತು ಓಡುತ್ತಿದೆ. ಈ ಮಾಯೆಯಲ್ಲಿ ತಂದೆ-ತಾಯಿ, ಮಕ್ಕಳ ಪ್ರೀತಿ, ಬಾಂಧವ್ಯ ಮರೆಯಾಗುತ್ತಿದೆ. ಇಳಿವಯಸ್ಸಿನಲ್ಲಿ ಮಕ್ಕಳು ಸಹ ಜೊತೆಯಲ್ಲಿ ಇಲ್ಲದಿರುವುದು ಯಾವ ಸಾಧನೆ ಮಾಡಿದಂತೆ? ಇದನ್ನು ಪೋಷಕರು, ಯುವಕರು ಆತ್ಮವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.
ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ದೊಡ್ಡದಾದ ಮಾದರಿ ಕಲ್ಯಾಣ ಮಂಟಪ ಕಟ್ಟಿದ್ದೀರಿ. ಎರಡು ಬಾರಿ ವಿಧಾನ ಪರಿಷತ್ ಸದಸ್ಯನಾಗಲು ಗಾಣಿಗ ಸಮಾಜದವರು ಸಂಪೂರ್ಣ ಬೆಂಬಲ ಕೊಟ್ಟಿದ್ದು, ಅದಕ್ಕೆ ಚಿರಋಣಿಯಾಗಿರುವೆ ಎಂದರು.
ಯುವ ಕಾಂಗ್ರೆಸ್ ಮುಖಂಡ ಚಿದಾನಂದ ಎಲ್.ಸವದಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಸಮುದಾಯದ ಅಧ್ಯಕ್ಷ ಬಸವರಾಜ ಬಿಂಗಿ ವಹಿಸಿದ್ದರು. ಡಾ. ಶ್ರೀ ಜಯ ಬಸವಕುಮಾರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಬಾಗಲಕೋಟಿ ಸಂಸದ ಪಿ.ಸಿ. ಗದ್ದಿಗೌಡರ ಗದಗ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಚಂದ್ರಪ್ಪ ಕರಿಕಟ್ಟಿ ಅವನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಷಣ್ಮುಖ ಬಡ್ನಿ, ಎನ್.ಎಸ್. ಕೆಂಗಾರ, ಡಾ. ಶೇಖರ ಸಜ್ಜನರ, ಬಿ.ಬಿ. ಐನಾಪೂರ, ಬಸವರಾಜ ನವಲಗುಂದ, ಎಚ್.ಬಿ. ತೋರಗಲ್, ರಮೇಶ ಕಪ್ಪತ್ತನವರ, ಸುಭಾಸ ಬಾಟಕುಕಿ ಮುರಘರಾಜೇಂದ್ರ ಬಡ್ನಿ, ಸುರೇಶ ಮರಳಪ್ಪನವರ, ಎಸ್.ವ್ಹಿ. ಪವಾಡಿಗೌಡ್ರ, ಗಿರಿಯಪ್ಪ ಅಸೂಟಿ, ಶ್ರೀಕಾಂತ ಲಕ್ಕುಂಡಿ, ತೋಟಪ್ಪ ಗಾಣಿಗೇರ, ಪರುಶುರಾಮ ಅಳಗವಾಡಿ, ಆಯ್.ಎಂ. ಕಿರೇಸೂರ, ಅಶೋಕ ಗುಜಮಾಗಡಿ, ಬಿ.ಎಸ್. ವಡವಟ್ಟಿ, ಗಂಗಾಧರ ಗಾಣಿಗೇರ, ರಮೇಶ ಮಂದಾಲಿ, ಶಿವಣ್ಣ ಹಟ್ನಳ್ಳಿ, ಬಸವಂತಪ್ಪ ನವಲಳ್ಳಿ, ದಶರಥ ಗಾಣಿಗೇರ, ಮಲ್ಲಪ್ಪ ಕೊಳ್ಳೇರಿ, ಹಾಲಪ್ಪ ಬಣವಿ, ಫಕ್ಕೀರಪ್ಪ ಸಂಧಗಿ, ಪ್ರಕಾಶ ವಿ.ಮುಧೋಳ, ಬಸವರಾಜ ಸುಂಕದ, ಸೋಮನಗೌಡ ಪಾಟೀಲ, ಅಮರೇಶ ಹಾದಿ, ಜಗದೀಶ ಬೆಳವಟಗಿ, ಮಲಕೇಶಗೌಡ ಪಾಟೀಲ, ಸಂದೀಪ ಕಪ್ಪತ್ತನವರ ಅಶೋಕ ಮಂದಾಲಿ ಯಚ್ಚರಗೌಡ ಗೋವಿಂದಗೌಡ್ರ ಮತ್ತಿತರರು ಹಾಜರಿದ್ದರು.
ಸಮುದಾಯದ ಹಿರಿಯ ಮುಖಂಡ ದಶೃಥ ಗಾಣಿಗೇರ ಮಾತನಾಡಿ, ಗಾಣಿಗ ಸಮುದಾಯಕ್ಕೆ ಭೀಮನ ಭಕ್ತಿಯಿದೆ. ಆದರೆ, ಲಿಂಗ, ವಿಭೂತಿ, ಗುರು ಸೇರಿ ಅಷ್ಟಾವರಣಗಳ ಕೊರತೆಯಿದೆ. ಅದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಈ ಸಮಾಜಕ್ಕೆ ಎಲ್ಲ ವ್ಯವಹಾರಗಳು ಒಲಿಯುತ್ತವೆ. ಇದಕ್ಕೆ ಅವರ ಶ್ರಮ, ಪ್ರಾಮಾಣಿಕತೆ ಹಾಗೂ ನಿಷ್ಠೆ ಕಾರಣ ಎಂದರು.