ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಲಿಫ್ಟ್ ಉದ್ಘಾಟನೆ ಹಾಗೂ ದಾನಿಗಳ ಸನ್ಮಾನ ಸಮಾರಂಭ ಜರುಗಿತು. ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ದಿವಂಗತ ಎಸ್.ಬಿ. ಸಂಕಣ್ಣವರ ಭಾವಚಿತ್ರಕ್ಕೆ ಪುಷ್ಪನಮನಗೈದರು.
ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ, ಮಾಜಿ ಶಾಸಕ ಡಿ.ಆರ್. ಪಾಟೀಲ, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಈಶಣ್ಣ ಮುನವಳ್ಳಿ, ಈ ಹಿಂದೆ ಎಸ್.ಬಿ. ಸಂಕಣ್ಣವರ ನಿರ್ಮಿಸಿದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಕಟ್ಟಡದ ಮೇಲಂತಸ್ತಿನ ನವೀಕರಣ ಹಾಗೂ ಲಿಫ್ಟ್ ಅಳವಡಿಸಲು ಧನ ಸಹಾಯ ಮಾಡಿದ ಮ್ಯಾನೇಜಿಂಗ್ ಡೈರೆಕ್ಟರ್ ಕಿರಣ ಪ್ರಕಾಶ ಭೂಮಾ ಹಾಗೂ ಗಣ್ಯ ವರ್ತಕರಾದ ಅಶೋಕ ಎಸ್. ಸಂಕಣ್ಣವರ ಇವರನ್ನು ಸಂಸದ ಬಸವರಾಜ ಬೊಮ್ಮಾಯಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಉದ್ದಿಮೆದಾರರಾದ ವಿಜಯಕುಮಾರ ಗಡ್ಡಿ, ತಾತನಗೌಡ ಎಸ್.ಪಾಟೀಲ, ಹರೀಶಕುಮಾರ ಎಸ್.ಶಹಾ, ಶರಣಬಸಪ್ಪ ಎಸ್.ಗುಡಿಮನಿ, ಪ್ರಕಾಶ ಉಗಲಾಟದ, ರಾಜಣ್ಣ ಮಲ್ಲಾಡದ, ಸದಾಶಿವಯ್ಯ ಮದರಿಮಠ, ಅಶೋಕಗೌಡ ಕೆ ಪಾಟೀಲ, ಅಶೋಕ ಎಸ್.ನೀಲುಗಲ್ಲ, ರಾಹುಲ ಸಂಕಣ್ಣವರ ಸೇರಿದಂತೆ ಚೇಂಬರ ಆಫ್ ಕಾಮರ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.