ಬೆಂಗಳೂರು: ಡಯಾಪ್ರಾಗ್ನಮ್ಯಾಟಿಕ್ ಹರ್ನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಚಿರತೆಗೆ ಶಸ್ತ್ರಚಿಕಿತ್ಸೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ಯಶಸ್ವಿಯಾಗಿದ್ದಾರೆ. ಹೌದು ಏಷ್ಯಾದಲ್ಲಿಯೇ ನಡೆದ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದ್ದು, ಚಿರತೆ ಹೊಟ್ಟೆ ಬಾಗ ಮತ್ತು ಶ್ವಾಸಕೋಶ ಬೇರ್ಪಡಿಸುವ ವಪೆ ಹರಿದು ಉಸಿರಾಡಲು ಕಷ್ಟಪಡುತ್ತಿತ್ತು. ಓಡಾಡಲೂ ಕೂಡ ಸಾಧ್ಯವಾಗುತ್ತಿರಲಿಲ್ಲ. ಚಿರತೆಗೆ ತಿಂದ ಆಹಾರ ಜೀರ್ಣಾವಾಗದೆ ವಾಂತಿಯಾಗುತ್ತಿತ್ತು. ಅಪರೂಪದ ಕಾಯಿಲೆಯಿದ ಬಳಲಿ ಚಿರತೆಯ ತೂಕ 13 ಕೆಜಿಗೆ ಇಳಿದಿತ್ತು.
ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಚಿರತೆ ಸ್ಥಿತಿ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನೀಡಿದ್ದರು. ಅಧಿಕಾರಿಗಳು ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ಸೂಚಿಸಿದ ಬಳಿಕ ಕಳೆದ ಮಾರ್ಚ್ನಲ್ಲಿ ಹೊಟ್ಟೆ ಬಾಗ ಮತ್ತು ಶ್ವಾಸಕೋಶ ಬೇರ್ಪಡಿಸುವ ಶಸ್ತ್ರಚಿಕಿತ್ಸೆ ಮಾಡಿದರು. ಉದ್ಯಾನವನದ ವೈದ್ಯ ಡಾ ಕಿರಣ್ ಕುಮಾರ್, ಡಾ ಆನಂದ್ ಮತ್ತು ಮಂಜುನಾಥ್ ತಂಡದ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ.
ಶಸ್ತ್ರಚಿಕಿತ್ಸೆ ಬಳಿಕ ಆರೇಳು ತಿಂಗಳುಗಳ ಕಾಲ ಚಿರತೆಯನ್ನು ಜೋಪಾನವಾಗಿ ಪೋಷಣೆ ಮಾಡಲಾಯಿತು. ಇದರಿಂದ ಸದ್ಯ ಚಿರತೆ 40 ಕೆಜಿ ತೂಕ ಹೆಚ್ಚಿಸಿಕೊಂಡು ಲವಲವಿಕೆಯಿಂದ ಇದೆ. ಇಂತಹ ಶಸ್ತ್ರಚಿಕಿತ್ಸೆ ಈ ಹಿಂದೆ ಯಶಸ್ವಿಯಾದ ಉದಾಹರಣೆಗಳಿಲ್ಲ. ಆದರೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈಧ್ಯಕೀಯ ತಂಡ ಯಶಸ್ವಿಯಾಗಿದೆ. ಸದ್ಯ ಹತ್ತು ತಿಂಗಳ ಚಿರತೆ ಆರೋಗ್ಯವಾಗಿದೆ.