ರಾಮನಗರ: ಇವತ್ತು ಇ.ಡಿ ಎಂಟ್ರಿ ಕೊಟ್ಟಿದೆ ಮುಂದೆ ದೊಡ್ಡ ದೊಡ್ಡ ತಿಮಿಂಗಿಲಗಳು ಹೊರ ಬರ್ತವೆ ಎಂದು ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, 187ಕೋಟಿ ಹಗರಣ ಮಾತಾಲ್ಲ, ಇದರ ಕುಮ್ಮಕ್ಕು ಕೊಟ್ಟವರು ಸರ್ಕಾರದಲ್ಲಿದ್ದಾರೆ. 15 ತಿಂಗಳಿನಿಂದ ಸರಕಾರ ನಡೆಸಿದ್ರು. ದಲಿತಕೇರಿಗಳಿಗೆ ಇಟ್ಟ ಪರಿಷಿಷ್ಠ ವರ್ಗದ ಹಣ ಗ್ಯಾರೆಂಟಿಗಳಿಗೆ ದುರುಪಯೋಗ ಪಡಿಸಿಕೊಂಡಿದೆ. ಆದ್ದರಿಂದ ಅತ್ಯಂತ ಪಾರದರ್ಶಕವಾಗಿ ಕ್ರಮ ಆಗಬೇಕು ಎಂದು ಹೇಳಿದರು.
ಇನ್ನೂ ರಾಮನಗರವನ್ನು ಬೆಂಗಳೂರು ದಕ್ಷಿಣಕ್ಕೆ ಸೇರಿಸಬೇಕು ಅಂತಿದ್ದಾರೆ. ಇಲ್ಲಿ ಬಂದು ನೋಡಲಿ, ಕಂದಾಯ ಭವನ ಕಟ್ಟಿದ್ದು ಯಾರು, ಮಿನಿ ವಿಧಾನಸೌಧ ಕಟ್ಟಿದ್ಯಾರು ಅಂತಾ ಗೊತ್ತಾಗುತ್ತೇ. ರಾಮನಗರದ 2010 ರಲ್ಲಿ ಕೇಂದ್ರ ದಿಂದ ಸಂಸದರಾಗಿ 10 ಕೋಟಿ ಹಣ ತಂದು ಸಾರ್ವಜನಿಕ ಆಸ್ಪತ್ರೆ ಕಟ್ಟಿದ್ರು. ಅದಕ್ಕೆ ಭಾರತೀಯ ಜನತಾ ಪಾರ್ಟಿ ಸಹಕಾರವೂ ಇದೆ. ಅನಿತಾ ಕುಮಾರಸ್ವಾಮಿಯವರು ಶಾಸಕರಾದ ಸಂದರ್ಭದಲ್ಲಿ ಎಷ್ಟು ಸೇತುವೆಗಳಾದ್ವು, ಅಭಿವೃದ್ಧಿ ಅಂತ ಏನಾದ್ರು ರಾಮನಗರ ಕಂಡಿದ್ರೆ ಅದು ಮಾನ್ಯ ದೇವೇಗೌಡರ ಪರಿಶ್ರಮ, ಕುಮಾರಸ್ವಾಮಿ ಕಲ್ಪನೆ ಮಾತ್ರ ಎಂದು ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.