ಬೆಳಗಾವಿ: ಇರುವೆಗೂ ಸಹ ಸ್ವಾಭಿಮಾನ ಇದೆ. ಸ್ವಾಭಿಮಾನ ಬಿಟ್ಟು ಇರಬಾರದು ಯಾರಿಗೂ ಹೆದರುವ ಜರೂರತ್ ಇಲ್ಲ ಎಂದು ಭಾಷಣದ ಮಧ್ಯೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿಗೆ ಪರೋಕ್ಷವಾಗಿ ಸಚಿವೆ ಹೆಬ್ಬಾಳಕರ್ ಟಾಂಗ್ ನೀಡಿದರು. ಅರಭಾವಿ ಗೋಕಾಕ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯನ್ನು ಏರ್ಪಡಿಸಲಾಗಿತ್ತು.
Advertisement
ಈ ಮದ್ಯೆ ಮಾತನಾಡಿದ ಅವರು, ನಾವು ದುಡಿದು ನಮ್ಮ ಮನೆ ನಡೆಸಬೇಕು. ಬೇರೆಯವರು ದುಡಿದು ನಮ್ಮನೆ ನಡೆಸೊಲ್ಲ. ನೀವು ನನ್ನ ಬೆನ್ನಿಗೆ ಚೂರಿ ಹಾಕಿದ್ರಿ ನೀವು ಮೋಸ ಮಾಡಿದ್ರಿ ಅಂತ ನಾನು ಹೇಳಲ್ಲ. ಕೆಲಸ ಮಾಡಿದವರು ಹೆಬ್ಬಾಳಕರ್ ಜತೆಯಲ್ಲಿರುವ ಅಣ್ಣತಮ್ಮಂದಿರು, ಕೆಲಸ ಮಾಡದವರೂ ಹೆಬ್ಬಾಳಕರ್ ಜೊತೆಗೆ ಇರುವ ಅಣ್ಣ ತಮ್ಮಂದಿರು ಎಂದು ಹೇಳಿದರು.