ನಿರೂಪಣೆಗೆ ಘನತೆ ನೀವು.. ನೀವಿಲ್ಲದೆ ಎಲ್ಲವೂ ಅಪೂರ್ಣ: ಅನುಶ್ರೀ ಭಾವುಕ

0
Spread the love

ಬೆಂಗಳೂರು: ನಿರೂಪಣೆಗೆ ಘನತೆ ನೀವು, ಕನ್ನಡಕ್ಕೆ ಶೋಭೆ, ನಿರೂಪಣೆ ನೀವಿಲ್ಲದೆ ಅಪೂರ್ಣ ಅಪರ್ಣ ಅಕ್ಕ ಎಂದು ನಿರೂಪಕಿ ಅನುಶ್ರೀ ಅಪರ್ಣಾ ನಿಧನಕ್ಕೆ ಭಾವುಕರಾಗಿದ್ದಾರೆಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ಈ ವಿಚಾರ ನೋವು ತಂದಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿಮ್ಮನ್ನು ಭೇಟಿಯಾದ ಕ್ಷಣ. ಇಂದಿಗೂ ಹಸಿರಾಗಿದೆ. ಅಂದು ಇಂದು ಎಂದೆಂದಿಗೂ ಕನ್ನಡಕ್ಕೆ ಒಬ್ಬರೇ ಮಹಾ ನಿರೂಪಕಿ ಅದು ನೀವು ಓಂ ಶಾಂತಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನುಶ್ರೀ ಬರೆದುಕೊಂಡಿದ್ದಾರೆ.

Advertisement

ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.


Spread the love

LEAVE A REPLY

Please enter your comment!
Please enter your name here