ಚುನಾವಣೆಗೂ ಈ ಯಾತ್ರೆಗೂ ಸಂಬಂಧವಿಲ್ಲ :ಬಸವರಾಜ ಬೊಮ್ಮಾಯಿ

0
Thank you Yatra by MP Basavaraja Bommai
Spread the love

ವಿಜಯಸಾಕ್ಷಿ ಸುದ್ದಿ, ಶಿಗ್ಗಾವಿ : ಶಿಗ್ಗಾವಿ-ಸವಣೂರು ಕ್ಷೇತ್ರದ ಜನತೆಗೆ ಧನ್ಯವಾದ ಯಾತ್ರೆ ಆರಂಭಿಸಿದ್ದು, ಇದು ಯಾವುದೇ ರಾಜಕೀಯ ಯಾತ್ರೆಯಲ್ಲ. ಮುಂದಿನ ಚುನಾವಣೆಗೂ ಈ ಯಾತ್ರೆಗೂ ಸಂಬಂಧವಿಲ್ಲ. ನಮ್ಮ-ನಿಮ್ಮ ನಡುವಿನ ಅವಿನಾಭಾವ ಸಂಬಂಧವನ್ನು ಶಾಶ್ವತಗೊಳಿಸಲು ಈ ಯಾತ್ರೆ ಮಾಡುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಅವರು ಶಿಗ್ಗಾವಿ ಹಾಗೂ ಸವಣೂರು ವಿಧಾನಸಭಾ ಕ್ಷೇತ್ರದ ಮುತ್ತಳ್ಳಿ, ತಡಸ, ಅಡವಿ ಸೋಮಾಪುರ, ಕುನ್ನೂರು, ಶ್ಯಾಡಂಬಿ, ಮಡಿ ಗ್ರಾಮಗಳಲ್ಲಿ ಶುಕ್ರವಾರ ಆರಂಭಿಸಿರುವ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ನಾನು ಶಾಸಕನಾಗಿಯೇ ನಿಮ್ಮ ಸೇವೆ ಮಾಡಬೇಕೆಂದೇನಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಹಾವೇರಿ ಗದಗ ಕ್ಷೇತ್ರದ ಸಂಸದನಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿ ಹಾಗೂ ನಿಮ್ಮ ವಯಕ್ತಿಕ ಕೆಲಸಗಳನ್ನು ಮಾಡಲು ನಾನು ಸದಾ ಸಿದ್ಧನಿದ್ದೇನೆ. ನಾನು ಶಾಸಕನಲ್ಲದಿದ್ದರೂ ನಿಮ್ಮ ಸೇವೆ ಮಾಡಲು ಅದಕ್ಕಿಂತ ಹೆಚ್ಚಿನ ಶಕ್ತಿಯನ್ನು ನೀವು ನನಗೆ ನೀಡಿದ್ದೀರಿ ಎಂದು ಹೇಳಿದರು.

ದೊಡ್ಡ ಪ್ರಮಾಣದ ಅಭಿವೃದ್ಧಿಯಾಗಬೇಕೆಂಬ ಪರಿಕಲ್ಪನೆ ನನ್ನದಾಗಿತ್ತು. ವಾಣಿಜ್ಯಿಕವಾಗಿ, ಶೈಕ್ಷಣಿಕವಾಗಿ ತಡಸ ಗ್ರಾಮ ಅಭಿವೃದ್ಧಿಯಾಗಬೇಕೆಂಬ ಬಯಕೆ ನನ್ನದಾಗಿದೆ. ಪ್ರಗತಿಯೆಂಬುದು ನಿರಂತರ ನಡೆಯುವ ಪ್ರಕ್ರಿಯೆ.

ತಡಸ ಗ್ರಾಮದಲ್ಲಿ ಎಲ್ಲ ಸಮುದಾಯದ ಜನರಿದ್ದಾರೆ. ಆವರೆಲ್ಲರೂ ನಮ್ಮವರು ಎಂದು ನನಗೆ ಬೆಂಬಲ ಕೊಟ್ಟಿದ್ದಾರೆ. ಪ್ರತಿಬಾರಿ ಚುನಾವಣೆಯಲ್ಲಿ ಮತ ಎಣಿಕೆ ತಡಸ ಹಾಗೂ ಮುತ್ತಳ್ಳಿ ಗ್ರಾಮದಿಂದ ಆರಂಭವಾಗುತ್ತದೆ. ಈ ಭಾಗದ ಜನರು ಕೇವಲ ಮತಗಳಷ್ಟೇ ಅಲ್ಲದೆ ಅತ್ಮಸ್ಥೆರ್ಯವನ್ನೂ ನನಗೆ ನೀಡಿದ್ದಾರೆ. ನಾನು ನಿಮ್ಮನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.

ಬರುವ ದಿನಗಳಲ್ಲಿ ಈ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗಬೇಕು. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಮುಂದುವರೆಯುತ್ತಿರುವ ತಾಲೂಕು ಎಂದು ಬದಲಾಯಿಸಲಾಗಿದೆ. ವರದಾ ನದಿಯಿಂದ ತಡಸದ ಕೆರೆಗೆ ನೀರು ಹರಿಸುವ ಕುರಿತು ನಮ್ಮ ಹಿರಿಯರು ಯಾರೂ ಯೋಚನೆ ಮಾಡಿರಲಿಲ್ಲ. ಯಾವುದು ಅಸಾಧ್ಯವಾಗಿತ್ತೋ ಅದನ್ನು ನಾನು ಮಾಡಿ ತೋರಿಸಿದ್ದೇನೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಬಗ್ಗೆ ಕಳಕಳಿ ಇಟುಕೊಂಡು ಯಾವಾಗಲೂ ಕೂಡ ನನ್ನ ಬಳಿ ಬರಬಹುದು ಎಂದರು.

ತಡಸ್ ಗ್ರಾಮ ಮೂರು ತಾಲೂಕುಗಳ ಕೇಂದ್ರ ಬಿಂದುವಾಗಿದೆ. ಈ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಕಾಡುತ್ತಿತ್ತು. ದೊಡ್ಡ ಮಳೆಯಾದರೆ ಮನೆಯೊಳಗೆ ನೀರು ಬರುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಊರಿಗೆ ಬಸ್ ನಿಲ್ದಾಣ, ಹೈಸ್ಕೂಲು, ಕಾಲೇಜು ಎಲ್ಲವನ್ನೂ ನಿಮ್ಮ ಸಹಕಾರದಿಂದ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here