ಭಗ್ನ ಮೂರ್ತಿಗಳನ್ನು ದುರಸ್ತಿಗೊಳಿಸಲು ಮನವಿ

0
Request to repair broken idols
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಭೀಷ್ಮಕೆರೆ ಮುಖ್ಯ ಪ್ರವೇಶದ್ವಾರದಲ್ಲಿ ಭಗ್ನಗೊಂಡ ಮೂರ್ತಿಗಳನ್ನು ದುರಸ್ತಿಗೊಳಿಸಲು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಕ್ರಾಂತಿಸೇನಾ ಗದಗ ಜಿಲ್ಲಾ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಕ್ರಾಂತಿಸೇನಾ ಗದಗ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರವೀಣ ಹಬೀಬ ಮಾತನಾಡಿ, ಭೀಷ್ಮಕೆರೆಯ ಮುಖ್ಯ ಪ್ರವೇಶ ದ್ವಾರದಲ್ಲಿರುವ ಶ್ರೀ ಕೃಷ್ಣ ಪರಮಾತ್ಮನ ಪ್ರತಿಮೆಯ ರಥದ ಒಂದು ಕುದುರೆ ಮುಕ್ಕಾಗಿದೆ. ಅದನ್ನು ಮರು ನಿರ್ಮಿಸಬೇಕು. ಅಲ್ಲಿ ಅಚಿಟಿಸಿರುವ ಪ್ರಚಾರದ ಪೋಸ್ಟರ್‌ಗಳನ್ನು ತೆರುವುಗೊಳಿಸಬೇಕು ಎಂದು ಹೇಳಿದರು.

ರಾಣಿ ಚಂದಾವರಿ ಮಾತನಾಡಿ, ಭೀಷ್ಮಕೆರೆಯ ಉದ್ಯಾನವನ ಸ್ವಚ್ಛತೆ ಇಲ್ಲದೆ ಗಲೀಜು ವಾತಾವರಣ ಸೃಷ್ಟಿಯಾಗಿದೆ. ಅದನ್ನು ಸ್ವಚ್ಛಗೊಳಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ವಿನಾಯಕ್ ಕಾಟವಾ, ರೇಣುಕಾ ಕಬಾಡಿ, ಅಕ್ಷತಾ ಪವಾರ, ರೇಣುಕಾ ಕಲ್ಬುರ್ಗಿ, ನಾರಾಯಣಸಾ ಕಬಾಡಿ, ನಾಗರಾಜ್ ಪವಾರ್, ರಾಮಣ್ಣ ನವಲಗುಂದ, ಸುನೀಲ ದರ್ಶನ್, ರಾಮಕಲ್ಲಪ್ಪ, ನಾಗರಾಜ, ರಾಘು ಪವಾರ್, ಸಂದೀಪ್ ಕಬಾಡಿ, ವಿಠ್ಠಲ್ ಬಾಕಳೆ ಮುರಳಿ ನಾಕೋಡ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here