ಮಗುವಿನ ಅನಾರೋಗ್ಯದಿಂದ ಮನನೊಂದು ತಂದೆ ಆತ್ಮಹತ್ಯೆ ಯತ್ನ!

0
Spread the love

ಹಾಸನ: ಮಗುವಿನ ಅನಾರೋಗ್ಯ ದಿಂದ ಮನನೊಂದು ತಂದೆ ಆತ್ಮಹತ್ಯೆ ಯತ್ನಸಿರುವ ಘಟನೆ ಹಾಸನದ ಹಿಮ್ಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಳೆಬೀಡು ಸಮೀಪದ ಬಸವರಾಯನಪುರ ಗ್ರಾಮದ ಗಂಗಸ್ವಾಮಿ ಯಿಂದ ಆಸ್ಪತ್ರೆಯ ಕಟ್ಟಡದ ಐದನೇ ಮಹಡಿಯ ತುದಿಯಲ್ಲಿ ನಿಂತು ಆತ್ಮಹತ್ಯೆ ಬೆದರಿಕೆಯೊಡ್ಡಿದ್ದಾರೆ.

Advertisement

ತನ್ನ ಎರಡು ತಿಂಗಳ ಮಗುವಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಗಾಗಿ ಹಿಮ್ಸ್ ಗೆ ದಾಖಲು ಮಾಡಿದ್ದರು. ಮಗುವಿನ ಅರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಗಂಗಸ್ವಾಮಿಯನ್ನ ಮನವೊಲಿಸಿ‌ ಕೆಳಗಿಳಿಸಿ ಅನಾಹುತವನ್ನು ತಪ್ಪಿಸಿದ್ದಾರೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here