ಅಹಿಂದ ನಾಯಕನನ್ನು ನೀವು ಸಹಿಸ್ತಿಲ್ಲ: ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ

0
Spread the love

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅಹಿಂದ ಸಮುದಾಯದ ಅತಿದೊಡ್ಡ ನಾಯಕ.‌ ಅದನ್ನು ನೀವು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಹೆಚ್‌.ಡಿ. ಕುಮಾರಸ್ವಾಮಿ ವಿರುದ್ದ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರದಲ್ಲಿ ಬಿಎಸ್​​​​​ವೈ ನಿಮ್ಮ ವಿರುದ್ಧ ಮಾತನಾಡಿದ್ದಾರೆ. ಇದೇ ವಿಚಾರಕ್ಕೆ ಬಿಜೆಪಿ ಜೊತೆ ಸೇರಿ ಪ್ರತಿಭಟನೆ ಮಾಡುತ್ತಿರುವುದು ನನಗೆ ಅರ್ಥವಾಗಿಲ್ಲ ಎಂದರು.

Advertisement

ಸಿಎಂ ಸಿದ್ದರಾಮಯ್ಯ ಅಹಿಂದ ಸಮುದಾಯದ ಅತಿದೊಡ್ಡ ನಾಯಕ.‌ ಅದನ್ನು ನೀವು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಪ್ರಧಾನಿಮಂತ್ರಿ ಮುಖ್ಯಮಂತ್ರಿಯಾಗೋದು ಗ್ರೇಟ್ ಅಲ್ಲ ಕುಮಾರಸ್ವಾಮಿ ಅವರೇ..‌ ಆದರೆ, ಕನಕಪುರದ ಒಬ್ಬ ರೈತನ ರೈತನ ಮಗ ರಾಜ್ಯಕ್ಕೆ ಉಪಮುಖ್ಯಮಂತ್ರಿಯಾಗುವುದು ಅಷ್ಟು ಸುಲಭದ ಕೆಲಸ ಅಲ್ಲ. ನೀವು ಬಸ್​ನಲ್ಲಿ ಎಂಎಲ್ಎಗಳನ್ನ ಕರೆದುಕೊಂಡು ಹೋಗಿ ರಾತ್ರೋರಾತ್ರಿ ಪದವಿ ತೆಗೆದುಕೊಂಡಷ್ಟು ಸುಲಭವಲ್ಲ ಎಂದರು.


Spread the love

LEAVE A REPLY

Please enter your comment!
Please enter your name here