ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಎಲ್ಲೆಡೆ ಐಪಿಎಲ್ ಕಾವು ಜೋರಾಗಿದೆ. ರಾಜ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳು ಉತ್ಸಾಹದಿಂದ ಸಂಭ್ರಮಿಸುತ್ತಿರುವುದು ಗೊತ್ತಿರುವ ಸಂಗತಿಯೇ. ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಸಲ ಭರ್ಜರಿ ಫಾರ್ಮ್‌ನಲ್ಲಿದೆ.
Advertisement
ಈ ಸಲ ಕಪ್ ನಮ್ದೆ ಆರ್ ಸಿಬಿ ಎನ್ನುವ ಮಾತು ಕಳೆದ ಸಲಕ್ಕಿಂತ ಈ ಸಲ ಅಧಿಕವಾಗಿದೆ. ಎಷ್ಟೋ ಜನ ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ, ಪುನಸ್ಕಾರ ಮಾಡಿರುವ ಸುದ್ದಿಗಳು ಹೊರ ಬಂದಿವೆ.
ಇದೀಗ ಆರ್‌ಸಿಬಿ ಅಭಿಮಾನಿಯೊಬ್ಬ ಕೊಪ್ಪಳ ಜಿಲ್ಲೆಯ ಕನಕಗಿರಿಯ ಕನಕರಾಯ ದೇವಸ್ಥಾನದ ಹುಂಡಿಯಲ್ಲಿ ಭಕ್ತಿಯ ಕಾಣಿಕೆಯ ಜೊತೆಗೆ ಹುಂಡಿಯಲ್ಲಿ ಈ ಸಲ ಕಪ್ ನಮ್ದೆ ಆರ್‌ಸಿಬಿ ಎಂಬ ಅಭಿಮಾನದ ಚೀಟಿಯೊಂದನ್ನು ಹಾಕಿದ್ದಾನೆ. ದೇವಸ್ಥಾನದ ಹುಂಡಿಯ ಕಾಣಿಕೆ ಹಣವನ್ನು ಎಣಿಸುವಾಗ ಈ ಚೀಟಿ ಪತ್ತೆಯಾಗಿದೆ.