ಉಡುಪಿ: ಮಣಿಪಾಲ ಫ್ಲಾಟ್ ಒಂದರಲ್ಲಿ ಸಿಕ್ಕಿಹಾಕಿಕೊಂಡ ಯುವತಿಯನ್ನು ಉಡುಪಿ ಜಿಲ್ಲಾ ಅಗ್ನಿಶಾಮಕ ದಳ ರಕ್ಷಣೆ ಮಾಡಿದ್ದಾರೆ. ಫ್ಲ್ಯಾಟಿನ 4ನೇ ಮಹಡಿಯಲ್ಲಿ ಯುವತಿ ಸಿಕ್ಕಿ ಹಾಕಿಕೊಂಡಿದ್ದಳು.
ಮನೆಯ ಡೋರ್ ಒಳಗಡೆ ಲೋಕ್ ಆಗಿ ಹೊರ ಬರದೆ ಸಿಕ್ಕಿಹಾಕಿಕೊಂಡ ಯುವತಿ 25 ವರ್ಷ ಕೃತಿ ಗೋಯಲ್ ಎಂದು ಗುರುತಿಸಲಾಗಿದೆ. ಅಗ್ನಿಶಾಮಕದ ದಳದ ಹಿರಿಯ ಅಧಿಕಾರಿಗಳು ಮತ್ತುಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿ ಯುವತಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.



