ಕೆರೆಯಲ್ಲಿ ಪತ್ತೆಯಾಯ್ತು ವಿಜಯನಗರ ಕಾಲದ ಪುರಾತನ ಶಿಲ್ಪ !

0
Spread the love

ದಾವಣಗೆರೆ:- ಕೆರೆಯಲ್ಲಿ ವಿಜಯನಗರ ಕಾಲದ ಪುರಾತನ ಶಿಲ್ಪ ಪತ್ತೆಯಾದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿ ಸವಳಂಗ ಗ್ರಾಮದ ಹೊರವಲಯದಲ್ಲಿರುವ ಹೊಸಕೆರೆಯಲ್ಲಿ ಜರುಗಿದೆ.

Advertisement

ಮೇಲ್ನೋಟಕ್ಕೆ ಭೈರವ, ಕಾಳಿ ಮತ್ತು ವೀರಭದ್ರ ಶಿಲ್ಪಗಳಿಗೆ ಹೊಂದಾಣಿಕೆಯಾಗುವ ಲಕ್ಷಣವಿರುವ ಶಿಲ್ಪ ಇದಾಗಿದೆ. ಕಪ್ಪು ಶಿಲೆಯಲ್ಲಿ ಕೆತ್ತಲಾಗಿದ್ದು ವಿಜಯನಗರ ಕಾಲಕ್ಕೆ ಸೇರಿದ್ದೆನ್ನಲಾಗಿದೆ.

ಚತುರ್ಭುಜಗಳಿದ್ದು, ಬಲ ಭಾಗದ ಮುಂಗೈನಲ್ಲಿ ಖಡ್ಗ, ಮೇಲ್ಮುಖವಾಗಿ ಭುಜದ ಮೇಲಿದೆ. ಬಲಭಾಗದ ಇನ್ನೊಂದು ಕೈಯಲ್ಲಿ ತ್ರಿಶೂಲವಿದ್ದು ಎಡಗೈಯೊಂದು ಭಗ್ನಗೊಂಡಿದೆ. ಇನ್ನೊಂದು ಕೈಯಲ್ಲಿ ಪಾಶವಿರುವಂತ ಲಕ್ಷಣ ಶಿಲ್ಪದಲ್ಲಿ ಕಂಡುಬಂದಿದೆ. ಶಿರದ ಎಡ, ಬಲ ಭಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ಶಿಲ್ಪದಲ್ಲಿ ಯಾವುದೇ ಶಾಸನ ಕೆತ್ತನೆ ಇಲ್ಲ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here