ಸಚಿವ ಎಚ್.ಕೆ. ಪಾಟೀಲರಿಗೆ ಅಭಿನಂದನೆ

0
Minister H.K. Kudos to Patil
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಬೇಲೂರು-ಹಳೆಬೀಡುಗಳ ಪ್ರಾಚೀನ ದೇವಾಲಯಗಳಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ 29 ಕೋಟಿ ರೂಗಳನ್ನು ಮೀಸಲಿಡುವ ಮೂಲಕ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರವಾಸೋದ್ಯಮ ಸಚಿವರಾದ ಡಾ. ಎಚ್.ಕೆ. ಪಾಟೀಲ್ ಅವರಿಗೆ ರಾಜ್ಯದ ಜನತೆಯ ಪರವಾಗಿ ಹುಲಕೋಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಸೀಮಸಾಬ ತಹಸೀಲ್ದಾರ ಅಭಿನಂಧಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಅವರು, ಪ್ರವಾಸೋದ್ಯಮ ಸಚಿವರಾದ ಡಾ. ಎಚ್.ಕೆ. ಪಾಟೀಲರು ರಾಜ್ಯದ ಐತಹಾಸಿಕ ದೇವಾಲಯಗಳನ್ನು ಅಭಿವೃದ್ಧಿಪಡಿಸಿ ಅಲ್ಲಿ ಪ್ರವಾಸಿಗರನ್ನು ಆಕರ್ಷಿಸಿ ಅವರ ಅನುಕೂಲಕ್ಕಾಗಿ ದೇವಾಲಯಗಳಿಗೆ ಮೂಲಭೂತ ಸೌಕರ್ಯಗಳ ಯೋಜನಾ ವರದಿಯನ್ನು ಸಿದ್ದಪಡಿಸಿಕೊಂಡಿದ್ದಾರೆ. ಈ ಯೋಜನಾ ವರದಿಯಲ್ಲಿ ಬೇಲೂರು-ಹಳೆಬೀಡು ವ್ಯಾಪ್ತಿಯಲ್ಲಿ ಬರುವ ಪ್ರಾಚೀನ ದೇವಾಲಯಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಪ್ರಗತಿಗೆ ಈಗಾಗಲೇ 29 ಕೋಟಿ ರೂಗಳನ್ನು ಮೀಸಲಿಟ್ಟು, ಈ ಪೈಕಿ 14 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆ.

ಪ್ರಾಚೀನ ಐತಿಹಾಸಿಕ ತಾಣ, ಸ್ಮಾರಕ, ದೇವಾಲಯವನ್ನು ಸುರಕ್ಷಿತ ಮತ್ತೆ ಪ್ರಗತಿಯ ರೂಪವನ್ನು ಕೊಡುವ ಮೂಲಕ ಸುಂದರ ರಾಜ್ಯದ ನಿರ್ಮಾಣಕ್ಕೆ ತಮ್ಮ ಸೃಜನಾತ್ಮಕ ಪ್ರಗತಿ ವಿಚಾರಗಳಿಂದಾಗಿ ಮುನ್ನುಡಿ ಬರೆಯುತ್ತಿರುವ ಸಚಿವರಾದ ಡಾ. ಎಚ್.ಕೆ. ಪಾಟೀಲರನ್ನು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here