ಬೆಂಗಳೂರು:- ಇಡಿ ಬಂಧನದಲ್ಲಿರುವ ಮಾಜಿ ಸಚಿವ ಬಿ. ನಾಗೇಂದ್ರ ಕಸ್ಟಡಿ ಇಂದು ಅಂತ್ಯವಾಗುತ್ತಿದೆ. ಅವರನ್ನು ಮತ್ತೆ ಕೋರ್ಟ್ ಮುಂದೆ ಇಡಿ ಹಾಜರ್ ಪಡಿಸಲಿದೆ.
Advertisement
  
ತನಿಖೆ ಇನ್ನಷ್ಟು ನಡೆಯಬೇಕಿರುವುದರಿಂದ ಮತ್ತೆ ಕಸ್ಟಡಿಗೆ ಕೇಳಲಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಾಗೇಂದ್ರ ಅವರನ್ನು ಇಡಿ ಹಾಜರು ಪಡಿಸಲಿದೆ.
ಮತ್ತೆ ಮೂರರಿಂದ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ನಾಗೇಂದ್ರರವರ ಇಬ್ಬರು ಪಿಎಗಳು, ನಾಗೇಂದ್ರರ ಪತ್ನಿ ಎಲ್ಲರ ಹೇಳಿಕೆಯನ್ನು ಪಡೆದಿರುವ ಇಡಿ, ಇನ್ನಷ್ಟು ವಿಚಾರಗಳನ್ನು ಹೊರತೆಗೆಯುವ ಅಗತ್ಯ ಇದ್ದಲ್ಲಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ.
ಅಕೌಂಟ್ಸ್ ವ್ಯವಹಾರ, ಹಣ ಎಲ್ಲೆಲ್ಲಿ ವ್ಯವಹಾರವಾಗಿದೆ, ಇನ್ನೂ ಯಾರು ಯಾರು ಇದ್ದಾರೆ ಹೀಗೆ ಅನೇಕ ಮಾಹಿತಿಗಳು ಇಡಿಗೆ ಬೇಕಾಗಿವೆ.


