ಧಾರವಾಡ: ವಿದ್ಯಾರ್ಥಿಯೋರ್ವ ಹಣ ನೀಡದ್ದಕ್ಕೆ ಚಾಕು ಇರಿದ ಘಟನೆ ಧಾರವಾಡದ ಸಪ್ತಾಪೂರದ ಸ್ಫೂರ್ತಿ ಕರಿಯರ್ ನಲ್ಲಿ ನಡೆದಿದೆ. ಕಲಬುರ್ಗಿ ಮೂಲದ ಬೀರಪ್ಪ ವಿದ್ಯಾರ್ಥಿ ಚಾಕು ಇರಿದಿದ್ದು, ಕರಿಯರ್ ನ ಮಾಲೀಕ ರಮೇಶ ಕಾಖಂಡಕಿ ಇರಿತಕ್ಕೊಳಗಾದರಾಗಿದ್ದಾರೆ.
Advertisement
ಎರಡು ಸಾವಿರ ಹಣ ನೀಡು ಎಂದು ಕೇಳಿದ್ದಕ್ಕೆ ನಾಳೆ ಬೆಳಗ್ಗೆ ಕೊಡುತ್ತೇನೆ ಎಂದಿದ್ದಕ್ಕೆ ತಲೆ, ಎದೆ ಭಾಗಕ್ಕೆ ಚಾಕು ಇರುದು ಪರಾರಿಯಾಗಿದ್ದಾನೆ. ರಮೇಶ ಸಧ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ಬೀರಪ್ಪನಿಗೆ ಪೊಲೀಸರ ಶೋಧ ಮಾಡುತ್ತಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.