ಬಾಗಲಕೋಟೆ: ಸಿಂಟೆಕ್ಸ್ನಲ್ಲಿ ಪೆಟ್ರೋಲ್ ಹಾಕಿ ಬಳಿಕ ಗುಡಿಸಲಿಗೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ – ಮಗಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿತ್ತು. ಇತ್ತ ಸುಟ್ಟು ಗಂಭೀರ ಗಾಯಗೊಂಡಿದ್ದ ಮಗ ಚಿಕಿತ್ಸೆ ಫಲಿಸದೆ ಮೃತನಾಗಿದ್ದಾನೆ. ಇದೇ ಜುಲೈ 16 ರಂದು ರಾತ್ರಿ 2.30 ರ ಸುಮಾರಿಗೆ ದುಷ್ಕರ್ಮಿಗಳು, ಈ ಶೆಡ್ಗೆ ಬೆಂಕಿ ಹಚ್ಚಿದ್ದರು.
ನೂರು ಲೀಟರ್ ಸಾಮರ್ಥ್ಯದ ಸಿಂಟೆಕ್ಷ್ನಲ್ಲಿ ಪೆಟ್ರೋಲ್ ತಂದು, 2 ಎಚ್‌ಪಿ ಮೋಟರ್ ಅಳವಡಿಸಿ ಪೈಪ್ ಮೂಲಕ ದಸ್ತಗೀರಸಾಬ್ ಶೆಡ್ಗೆ ಪೆಟ್ರೋಲ್ ಸಿಂಪಡಿಸಿ ನಂತರ ಬೆಂಕಿ ಹಚ್ಚಿದ್ದರು. ಶೆಡ್ನಲ್ಲಿ 55 ವರ್ಷದ ಜೈಬುನ್, 25 ವರ್ಷದ ಮಗಳು ಶಬಾನ್ ಸಜೀವ ದಹನವಾಗಿದ್ದರು.
ದಸ್ತಗೀರಸಾಬ್, ಮಗ ಸುಬಾನ್, ಮೊಮ್ಮಗ ಸಿದ್ದಿಕ್ ಬದುಕಿ ಬಂದಿದ್ದರು. ಗಂಭೀರ ಗಾಯಗೊಂಡ ಸುಬಾನ್ ಪೆಂಡಾರಿಯನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು 27 ವರ್ಷದ ಸುಬಾನ್ ಮೃತಪಟ್ಟಿದ್ದಾನೆ. ಇದರಿಂದ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.
ಒಂದು ಬಡ ಕುಟುಂಬದ ವಾಸದ ತಾಣವನ್ನ ಪೆಟ್ರೋಲ್ ಹಾಕಿ ಸುಡುವದಾ ? ಮಾನವೀಯ ಮೌಲ್ಯಗಳಿಂದ ಅತಿ
ದೂರ ಸಾಗತಾ ಇರುವದು ಸ್ವಸ್ಥ ಸಮಾಜಕ್ಕೆ ಮಾರಕ ಈ
ಪರಿಸ್ಥಿತಿ ಬೆಳೆಯದಂತೆ ಕಾನೂನು ಕ್ರಮಗಳು ಬಿಗಿಯಾಗ
ಬೇಕು.ಯಾವದೆ ವ್ಯಕ್ತಿ ಇಂತಹ ಅಮಾನವೀಯ ಕೃತ್ಯ ಎಸ
ಗಲು ಭಯಪಡಬೇಕು ಅಂಥ ಪರಿಸ್ಥಿತಿಗಾಗಿ ಸರ್ಕಾರ
ಚಿಂತನೆ ನಡೆಸಬೇಕು