ಕಣವಿಯವರ ಜೀವನವೇ ಸಮನ್ವಯದ ಕಾವ್ಯ

0
A program on poet and literature Channaveera Kanavi in ​​Hombala
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹೊಂಬಳದ ಈ ನೆಲದಲ್ಲಿ ಹುಟ್ಟಿ ಬೆಳೆದ ಚನ್ನವೀರ ಕಣವಿಯವರು ಸಾಹಿತ್ಯದ ಮೇರು ಶಿಖರವಾದದ್ದು ಅವರ ಪರಿಶ್ರಮದ ಮೂಲಕ. ಅವರು ನಡೆದಾಡಿದ ಈ ನೆಲದಲ್ಲಿ ನಾವು ಕಾರ್ಯ ನಿರ್ವಹಿಸುತ್ತಿರುವುದು ತಮ್ಮ ಸೌಭಾಗ್ಯ. ಅವರು ಹುಟ್ಟಿದ ಈ ನೆಲದಲ್ಲಿ ಅವರ ಹೆಸರಿನಲ್ಲಿ ಒಂದು ಗ್ರಂಥಾಲಯವನ್ನು ಸ್ಥಾಪಿಸಲು ಪ್ರಯತ್ನಿಸುವುದಾಗಿ ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.

Advertisement

ಗದಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹೊಂಬಳದ ಸರಕಾರಿ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೊಂಬಳದ ಸರಕಾರಿ ಪ್ರೌಢಶಾಲೆಯಲ್ಲಿ `ಚಂಬೆಳಕಿನ ಕವಿ-ಚನ್ನವೀರ ಕಣವಿ : ಜೀವನ ಮತ್ತು ಕಾವ್ಯ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಕ ಈಶ್ವರ ಕುರಿ ಮಾತನಾಡಿ, ಬಾಲ್ಯದಲ್ಲಿ ಎಲ್ಲರಂತೆ ಸಹಜರಾಗಿ ಬೆಳೆದ ಕಣವಿಯವರು ತಮ್ಮ ಪ್ರೌಢಾವಸ್ಥೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು. ತಮ್ಮ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣದ ಸಮಯದಲ್ಲೂ ಅವರ ಸುತ್ತಲೂ ಸಾಹಿತ್ಯದ ಸಹಚಾರವೇ ಮೇಳೈಸುತ್ತಿತ್ತು. ಅವರ ಶಾಂತ ಸ್ವಭಾವದಂತೆ ಅವರ ಕಾವ್ಯವೂ ಶಾಂತವಾಗಿಯೇ ಮೂಡಿಬಂದಿದೆ ಎಂದರಲ್ಲದೆ, ಸಾಹಿತಿ ದಂಪತಿಗಳಾಗಿ ಕನ್ನಡ ಸಾಹಿತ್ಯ ಪರಿಸರದಲ್ಲಿ ಗುರುತಿಸಿಕೊಂಡ ಚನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ಅವರ ಅನ್ನೋನ್ಯತೆಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಶರಣಪ್ಪ ದಿದ್ದಿಮನಿ, ಮಖ್ಯೋಪಾಧ್ಯಾಯ ಎಂ.ವಿ. ಪಾಟೀಲ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕಾ ಕಸಾಪ ಅಧ್ಯಕ್ಷರಾದ ಡಾ. ರಶ್ಮಿ ಅಂಗಡಿ ಮಾತನಾಡಿದರು.

ವೇದಿಕೆಯಲ್ಲಿ ಗದಗ ಬೆಟಗೇರಿ ಇನ್ನರ್‌ವೀಲ್‌ನ ಪಿ.ಡಿ.ಸಿ ಪ್ರೇಮಾ ಗುಳಗೌಡರ ಮತ್ತು ಹೊಂಬಳ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಲಲಿತಾ ಹುಣಶೀಕಟ್ಟಿ ಹಾಜರಿದ್ದರು. ಕಾರ್ಯಕ್ರಮವನ್ನು ಗದಗ ತಾಲೂಕಾ ಕಸಾಪ ಕಾರ್ಯದರ್ಶಿ ವಿಶ್ವನಾಥ ಬೇಂದ್ರೆ ನಿರೂಪಿಸಿದರು. ತಾಲೂಕಾ ಕಸಾಪ ಕೋಶಾಧ್ಯಕ್ಷರಾದ ಪಾರ್ವತಿ ಬೇವಿನಮರದ ನಿರ್ವಹಿಸಿ ವಂದಿಸಿದರು.

ಹಿರಿಯ ಶಿಕ್ಷಕಿಯರಾದ ವಿ.ಆರ್. ಜಂಗಮನಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸೌಮ್ಯ ಹಾಲನವರ್, ಸೌಮ್ಯ ಮಲ್ಲಾಪೂರ, ರಿಜ್ವಾನ್ ಕಲೇಬಾಯಿ, ಮಲ್ಲಮ್ಮ ಯಲಬುರ್ಗಿ, ಸುಜಾತಾ ಅಣ್ಣಿಗೇರಿ ಮತ್ತು ತಂಡದವರಿಂದ ಚನ್ನವೀರ ಕಣವಿ ಅವರ ಹಲವಾರು ಗೀತೆಗಳು ಮೂಡಿ ಬಂದವು. ಶಾಲೆಯ ಬೋಧಕ ಮತ್ತು ಬೋದಕೇತರ ಸಿಬ್ಬಂದಿಗಳು, ಸುರೇಶ ಬಳಗಾರ, ಪ್ರಣವ ಮಹಾಂತ ಬಳಗಾರ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದ ಭಾಗದಲ್ಲಿ ಕಾಲಕಾಲಕ್ಕೆ ಪ್ರಮುಖ ಕವಿಗಳು ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ಕೊಟ್ಟಿದ್ದಾರೆ. ಜಗತ್ತಿನ ಸಾಹಿತ್ಯದಲ್ಲಿ ಕನ್ನಡದ ಗೌರವವನ್ನು ಹೆಚ್ಚಿಸುವ ಕಾರ್ಯ ಅವರಿಂದ ಸಾಧ್ಯವಾಗಿದೆ. ನವೋದಯ-ನವ್ಯ ಕಾಲಘಟ್ಟದಲ್ಲೂ ಉತ್ತರ ಕರ್ನಾಟಕದ ಕೊಡುಗೆ ಅನುಪಮ. ಅವರಲ್ಲಿ ಚಂಬೆಳಕಿನ ಕವಿ ಎಂದೇ ಗುರುತಿಸಲ್ಪಡುವ ಚನ್ನವೀರ ಕಣವಿ ಅವರ ಪಾತ್ರ ಬಹು ದೊಡ್ಡದು ಎಂದರು.

 


Spread the love

LEAVE A REPLY

Please enter your comment!
Please enter your name here