ಬೆಂಗಳೂರು: ವಾಟರ್ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿಯಾಗಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಈ ರಸ್ತೆ ಅಪಘಾತ ನಡೆದಿದೆ. ಇಶಾನ್ ಮೃತ ದುರ್ಧೈವಿಯಾಗಿದ್ದು, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 23 ವರ್ಷದ ಇಶಾನ್ ಎಂಬ ಎಂಬಿಬಿಎಸ್ ವಿದ್ಯಾರ್ಥಿಗೆ.
ಎದುರುಗಡೆಯಿಂದ ಯಮನಂತೆ ಬಂದ ವಾಟರ್ ಟ್ಯಾಂಕರ್ ಅಪ್ಪಳಿಸಿದೆ. ವಿದ್ಯಾರ್ಥಿಗೆ ಗುದ್ದಿ, ಇಶಾನ್ ಮೇಲೆಯೇ ಹರಿದಿದೆ. ಇಷ್ಟಾದರೂ ಚಾಲಕ ತಕ್ಷಣ ನಿಲ್ಲಿಸದೆ ಮುಂದೆ ಸಾಗಿದ್ದಾನೆ. ಚಲಿಸುತ್ತಿದ್ದ ಟ್ಯಾಂಕರ್ ಅನ್ನು ದ್ವಿಚಕ್ರ ವಾಹನ ಸವಾರರು ತಡೆದು ನಿಲ್ಲಿಸಿ ಚಾಲಕನನ್ನು ಹಿಡಿದಿದ್ದಾರೆ.
ಸ್ಥಳಕ್ಕೆ ಬಂದು ಮಗನ ಮೃತ ದೇಹ ನೋಡಿದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಬಿಕ್ಕಿ ಬಿಕ್ಕಿ ಅತ್ತ ತಾಯಿ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಶಾನ್ ಎಂಬಿಬಿಎಸ್ ಫೈನಲ್ ಇಯರ್ ಸ್ಟೂಡೆಂಟ್ ಆಗಿದ್ದು, ಇವರ ಕುಟುಂಬ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ವಾಸವಿತ್ತು. ನಿನ್ನೆ ಸಂಜೆ ಸ್ನೇಹಿತನನ್ನು ಮೀಟ್ ಆಗಲು ಥಣಿಸಂದ್ರ ಬಳಿ ಈತ ಬಂದಿದ್ದ ವೇಳೆ ದುರ್ಘಟನೆ ನಡೆದಿದೆ.