ಜೀಪ್ ಮೇಲೆ ಕಲ್ಲು ತೂರಿ ಕಳ್ಳರ ಗ್ಯಾಂಗ್ ಎಸ್ಕೇಪ್! ಪೊಲೀಸರ- ಕಳ್ಳರ ನಡುವಿನ ಪೈಟ್ ನೋಡಿ ಬೆಚ್ಚಿ ಬಿದ್ದ ಗ್ರಾಮಸ್ಥರು

0
Spread the love

ಚಿತ್ರದುರ್ಗ: ಪೊಲೀಸರ- ಕಳ್ಳರ ನಡುವಿನ ಪೈಟ್ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಹೌದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಆಂದ್ರದ ಡೆಡ್ಲಿ ಕಳ್ಳರ ಗ್ಯಾಂಗ್ ಓಡಾಟದ ಮಾಹಿತಿ ಆಧಾರದ ಮೇಲೆ ಕಳ್ಳರನ್ನ ಹಿಡಿಯಲು ಪೊಲೀಸರು ಬೊಲೆರೋ ವಾಹನವನ್ನು ಅಡ್ಡ ಹಾಕಿದ್ದರು.

Advertisement

ಈ ವೇಳೆ ಕಳ್ಳರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಏಕಾಏಕಿ ಕಳ್ಳರು ದಾಳಿ ಮಾಡಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಏರ್ ಫೈರಿಂಗ್ ಮಾಡಿದ್ದಾರೆ.

ಇನ್ನೂ ಕಳ್ಳರು ಕಲ್ಲು ತೂರಿದ್ದರಿಂದ ಪೊಲೀಸರ ಜೀಪಿನ ಗ್ಲಾಸ್ ಡ್ಯಾಮೇಜ್ ಆಗಿದೆ. ಸುಮಾರು 7 ಮಂದಿ ಗ್ಯಾಂಗ್‌ ಆಂಧ್ರಪ್ರದೇಶದ ರಿಜಿಸ್ಟ್ರೇಷನ್‌ ಹೊಂದಿದ್ದ ಬೊಲೆರೋ ವಾಹನದಲ್ಲಿ ಬಂದಿದ್ದರು.

ಇದನ್ನೂ ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು, ತಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ಗಾಡಿ ನಿಲ್ಲಿಸದೇ ಖತರ್ನಾಕ್‌ ಕಳ್ಳರು, ಪೊಲೀಸರಿಗೆ ಕಲ್ಲು ತೂರಿದ್ದಾರೆ.

ದರೋಡೆಕೋರರು ಎಂಬ ಅನುಮಾನದಿಂದ ಪೊಲೀಸರು ಅಲರ್ಟ್ ಆಗಿದ್ದಾರೆ. ಬೊಸೇ ದೇವರಹಟ್ಟಿ, ಕೋಟೆ ನಗರ ಒಳ ಮಾರ್ಗದಲ್ಲಿ ಕುದಾಪುರ ಕಡೆ ಬರುತ್ತಿದ್ದ ಕಳ್ಳರಿಗೆ, ಪೊಲೀಸರು ಮನಮಯ್ಯನಹಟ್ಟಿ ಕುದಾಪುರ ಒಳ ಮಾರ್ಗದಲ್ಲಿ ಎದುರಾಗಿದ್ದರು.

ನಾಯಕನಹಟ್ಟಿ ಠಾಣೆ ಪಿಎಸ್‌ಐ ಶಿವಕುಮಾರ್ ತಂಡ ಬೊಲೇರೋ ವಾಹನದಲ್ಲಿ ಬಂದಿದ್ದ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಹಿರೇಹಳ್ಳಿ, ಬೇಡರೆಡ್ಡಿಹಳ್ಳಿ, ಬುಕ್ಕಂಬೂದಿ ಮಾರ್ಗದಲ್ಲಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ಸ್ಥಳಕ್ಕೆ ಚಿತ್ರದುರ್ಗ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ನಡೆದ ಘಟನೆ ಕುರಿತು ಸ್ಟಲಿತರುಲ್ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.


Spread the love

LEAVE A REPLY

Please enter your comment!
Please enter your name here