ಬೆಂಗಳೂರು: ಯಾವುದೇ ಕಾರಣಕ್ಕೂ ಹೋರಾಟ ಕೈಬಿಡಲ್ಲ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಳೆಯಾಗಿ ಪ್ರವಾಹ ಸೃಷ್ಟಿಯಾಗಿದೆ. ಡೆಂಘೀಯಿಂದಾಗಿ ಜನ ಸಾಯುತ್ತಿದ್ದಾರೆ. SCP-TSP ದಲಿತರ ಹಣ ದುರುಪಯೋಗ ಆಗಿದೆ.
Advertisement
ಇದರ ಬಗ್ಗೆ ಚರ್ಚೆ ಆಗಬೇಕಿದೆ. ನಾವು ಈ ಹೋರಾಟವನ್ನು ನಿಲ್ಲಿಸಲ್ಲ. ಸದನದಲ್ಲಿ ಮುಡಾ ಹಗರಣ ಸೇರಿ ಬೇರೆ ವಿಚಾರ ಚರ್ಚೆಯಾಗಬೇಕು. ಸ್ಪೀಕರ್ ಮಾತು ಕೇಳಿ ಸದನಕ್ಕೆ ಬಂದಿದ್ದೇವೆ. ಯಾವುದೇ ಕಾರಣಕ್ಕೂ ಹೋರಾಟ ಕೈಬಿಡಲ್ಲ ಎಂದರು.
ವಾಲ್ಮೀಕಿ ಆಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ ಲಪಟಾಯಿಸಿ ತೆಲಂಗಾಣ ಚುನಾವಣೆಗೆ ಬಳಸಿದ್ದು, ನಮ್ಮ ಹೋರಾಟದ ಪರಿಣಾಮ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರು. ಇದರಲ್ಲಿ ಸಿದ್ದರಾಮಯ್ಯರ ಪಾತ್ರವೂ ಇದ್ದು ಅವರು ರಾಜೀನಾಮೆ ನೀಡಬೇಕು ಎಂದು ಹೇಳಿದರು.