ವಿಜಯಸಾಕ್ಷಿ ಸುದ್ದಿ, ಗದಗ : ಹೋಟೆಲ್ ಒಡೆಯರ ಸಂಘ ಗದಗ ಇವರ ವತಿಯಿಂದ ಜಯಲೈ 23ರ ಸಂಜೆ 6.30 ಗಂಟೆಗೆ ಗದುಗಿನ ಶ್ರೀ ವೀರನಾರಾಯಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಶ್ರೀ ಹಟ್ಟಿಯಂಗಡಿ ಮತ್ತು ಶ್ರೀ ಮೆಕ್ಕೆ ಕಟ್ಟು ಮೇಳದ ಆಯುಧ ಕಲಾವಿದರ ತಂಡ ಮೇಳ ಇವರಿಂದ `ಕವಿರತ್ನ ಕಾಳಿದಾಸ’ ಯಕ್ಷಗಾನ ಪ್ರದರ್ಶನ ಏರ್ಪಡಿಸಿದೆ.
Advertisement
ಈ ಯಕ್ಷಗಾನದಲ್ಲಿ ಪ್ರಖ್ಯಾತ ಕಲಾವಿದರಾದ ಜಲವಳ್ಳಿ ವಿದ್ಯಾಧರ ರಾವ್, ರಮೇಶ್ ಭಂಡಾರಿ, ಶಂಕರ್ ಹೆಗಡೆ, ನಾಗರಾಜ್ ಭಂಡಾರಿ, ರಾಜೇಶ್ ಭಂಡಾರಿ, ಸನ್ಮಯ್ ಭಟ್ ಮುಂತಾದ ಗಜಗಟ್ಟಿ ಮುಮ್ಮೇಳದ ಕಲಾವಿದರು ಹಾಗೂ ಹಿಮ್ಮೇಳದಲ್ಲಿ ಆಡಿ ಸಂತೋಷ್ ಕುಮಾರ್, ನೂರು ಸುಬ್ರಹ್ಮಣ್ಯ ಹೆಗಡೆ, ಪ್ರಶಾಂತ್ ಭಂಡಾರಿ ಗುಣವಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಸಂಘದ ಗದಗನ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.