ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂದರಗಿ ಗ್ರಾಮದ ಕೆರೆ ಸುಮಾರು ವರ್ಷಗಳ ಅನಂತರ ಭರ್ತಿಯಾಗಿದ್ದು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಬಾಗಿನ ಅರ್ಪಿಸಿದರು.
ಮಳೆಯ ಅಭಾವದಿಂದ ಹಲವು ವರ್ಷಗಳಿಂದ ಕೆರೆ ಭರ್ತಿಯಾಗಿರಲಿಲ್ಲ. ಈ ಬಾರಿ ಉತ್ತಮ ಮಶೆ ಸುರಿದು ಎಲ್ಲ ಕೆರೆಗಳು, ಹಳ್ಳ-ಕೊಳ್ಳಗಳು ಮೈದುಂಬಿವೆ. ಇದರಿಂದ ರೈತರಿಗೆ ಸಂತೋಷವಾಗಿದೆ. ಕೆರೆ ಭರ್ತಿಯಾಗಿದ್ದರಿಂದ ಅಂತರ್ಜಲವೂ ವೃದ್ಧಿಸಲಿದ್ದು, ಬೇಸಗೆಯಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ ಎಂದರು.
ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ, ಗ್ರಾಮದ ಮುಖಂಡರಾದ ಬೋಜೆಪ್ಪ ಕುಂಬಾರ, ಗವಿಸಿದ್ದಪ್ಪ ಹಾವರಗಿ, ಗವಿಸಿದ್ದಪ್ಪ ಕುರಿ, ಬಸವರಾಜ ಹಲಗೇರಿ, ನಾಗರಾಜ ಕಂಬಳಿ, ಇಂದ್ರೇಶ ಕೊಳ್ಳಿ, ಬಿಜೆಪಿ ಯುವ ಮುಖಂಡರಾದ ಆರ್. ದೇವಾನಂದ, ಶರಣಯ್ಯಸ್ವಾಮಿ ಉಡುಮಕಲ್ ಇದ್ದರು.
ಇಂದರಗಿ ಕೆರೆಗೆ ಶಾಸಕ ಪರಣ್ಣ ಮುನವಳ್ಳಿ ಬಾಗಿನ
Advertisement