ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಪೋಲಿಸರ ಕಾರ್ಯಾಚರಣೆ ನಡೆಸಿ ಬೇರೆಡೆ ಗಮನ ಸೆಳೆದು ಚಿನ್ನಾಭರಣ ಕದಿಯುತ್ತಿದ್ದ ಗ್ಯಾಂಗ್ ಅರೆಸ್ಟ್ ಮಾಡಿದ್ದಾರೆ. ಬುರ್ಕಾ ಧರಿಸಿ ಬಂದಿದ್ದ ಇಬ್ಬರು ಮಹಿಳೆಯರಿಂದ ಈ ಕೃತ್ಯ ಎಸಗಿದ್ದು, ಆರೋಪಿಗಳು ಚಿತ್ರದುರ್ಗದ ಭರಮಸಾಗರದ ಮೂಲದರಾಗಿದ್ದಾರೆ. ಜ್ಯೂವೆಲ್ಲರಿ ಶಾಪ್ ನಲ್ಲಿ 4.75ಲಕ್ಷ ಮೌಲ್ಯದ 78 ಗ್ರಾಂ ಚಿನ್ನದ ಸರ ಕಳ್ಳತನ ಮಾಡಿದ್ದರು.
Advertisement
ಕದ್ದ ಒಡವೆಗಳನ್ನ ಚಿತ್ರದುರ್ಗ ದ ಭರಮ ಸಾಗರದಲ್ಲಿ ಅಡಮಾನವಿಟ್ಟಿದ್ರು. ಇದನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ದೇವರಗೆರೆ ಪಕ್ಕದ ಖಾಲಿ ಜಾಗದಲ್ಲಿ ಇಂಡಿಗೋ ಕಾರ್ ನಲ್ಲಿದ್ದ ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಪೋಲಿಸರು ಬಂಧಿಸಿದ್ದಾರೆ. ಇನ್ನೂ ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.