ಪಿಂಜಾರ/ನದಾಫ್ ನಿಗಮಕ್ಕೆ ಅನುದಾನ ನೀಡಿ

0
Appeal to Chief Minister through Tehsildar
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದಲ್ಲಿ ನದಾಫ್/ಪಿಂಜಾರ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮವನ್ನು ಸರಕಾರ ಘೋಷಿಸಿದ್ದು ಇಲ್ಲಿಯವರೆಗೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ.

Advertisement

ಕೂಡಲೇ ಸಮಾಜದ ಈ ನಿಗಮಕ್ಕೆ ಅನುದಾನವನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಸೋಮವಾರ ಪಿಂಜಾರ/ನಧಾಪ್ ಸಂಘದವರು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಸುಮಾರು 22-25 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನದಾಫ್/ಪಿಂಜಾರ ಸಮಾಜದವರು ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಸೇರಿದಂತೆ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಇದು ಇಸ್ಲಾಂ ಪಂಗಡದಲ್ಲಿದ್ದರೂ ಸಹ ಸರಕಾರ ವೃತ್ತಿಪರ ಜಾಗತಿಗಳ ವಿಂಗಡನೆ ಅನ್ವಯ ನದಾಫ್, ಪಿಂಜಾರರನ್ನು ಉಪಪಂಗಡಕ್ಕೆ ಸೇರಿಸಿದೆ. ಇದರಿಂದ ಹಿಂದುಳಿದ ವರ್ಗಗಳ ಪ್ರವರ್ಗ-1ರ ಮೀಸಲಾತಿಯನ್ನು ಹೊಂದಿದೆ.

ಅನೇಕ ಸೌಲಭ್ಯಗಳಿಂದ ಸಮಾಜ ವಂಚಿತವಾಗುತ್ತಿರುವ ಹಿನ್ನೆಲೆಯಲ್ಲಿ ನದಾಫ್/ಪಿಂಜಾರ ಸಮಾಜಕ್ಕೆ ಪತ್ಯೇಕ ನಿಗಮ ಮಂಡಳಿ ಮಾಡಲು ಬೇಡಿಕೆ ಇಡಲಾಗಿತ್ತು. ಈ ಹಿಂದಿನ ಸರಕಾರ ಸಮಾಜದ ಸಮಸ್ಯೆಗಳನ್ನು ಗಮನಿಸಿ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಿತ್ತು. ಇದೀಗ ಹೊಸ ಸರಕಾರ ಬಂದ ನಂತರ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕೂಡಲೇ ನಿಗಮಕ್ಕೆ ಅನುದಾನ ಬಿಡುಗಡೆಗೊಳಿಸಬೇಕೆಂದು ಮುಖ್ಯಮಂತ್ರಿಗಳನ್ನು ಮನವಿ ಮೂಲಕ ಆಗ್ರಹಿಸಿದರು.

ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎಂ.ಎಂ. ಗಾಡಗೋಳಿ, ರಮಜಾನಸಾಬ ನದಾಫ್, ಶರೀಪ್ ನದಾಫ್, ಕಲಂದರ ನದಾಫ್, ಹುಸೇನಸಾಬ ನದಾಫ್, ಖಾಜರಲಿ ನಧಾಪ್, ಅಲ್ಲಿಸಾಬ ನದಾಫ್, ನಜೀರಸಾಬ ಶರೀಪಸಾಬ ನದಾಫ್, ಹಜರುದ್ದೀನ್ ಅತ್ತಿಗೇರಿ, ದಾದಾಖಲಂದರಬಾಷಾ ನದಾಫ್, ಹಸನಸಾಬ ನದಾಫ್ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here