ಬೆಂಗಳೂರು: ಯಾರ ಮುಲಾಜಿಗೂ ಒಳಗಾಗಲ್ಲ, ಯಾರನ್ನು ರಕ್ಷಣೆ ಮಾಡುವುದಿಲ್ಲ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ತಗೊಳ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಉಪ್ಪು ತಿಂದವರು ನೀರು ಕುಡಿಯಲೇಬೇಕು. ವಾಲ್ಮೀಕಿ ಅಕ್ರಮದಲ್ಲಿ ಮೂರು ತನಿಖಾ ಸಂಸ್ಥೆ ಗಳು ತನಿಖೆ ನಡೆಯುತ್ತಿವೆ.
ಎಸ್ಐಟಿ, ಸಿಬಿಐ, ಇ.ಡಿ ಸಂಸ್ಥೆ ಗಳು ತನಿಖೆ ನಡೆಸುತ್ತಿದೆ. ಒಂದೇ ಪ್ರಕರಣದಲ್ಲಿ ಮೂರು ತನಿಖಾ ಸಂಸ್ಥೆಗಳು ತನಿಖೆ ಮಾಡ್ತಿರೋದು ವಿಶೇಷ. ನಾವು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಅಂತ ಯಾವತ್ತೂ ಹೇಳಿಲ್ಲ. ವಿರೋಧ ಪಕ್ಷ ಗಳು ಪದೇ ಪದೇ ಹೇಳ್ತಾರೆ 187 ಕೋಟಿ ದುರುಪಯೋಗ ಆಗಿದೆ ಅಂತಾರೆ. ಎಂಜಿ ರಸ್ತೆಯ ಬ್ಯಾಂಕ್ ನಿಂದ ತೆಲಂಗಾಣಕ್ಕೆ ಹೋಗಿರೋದು 89 ಕೋಟಿ 63 ಲಕ್ಷ. ನಾವು ಎಸ್ಐಟಿ ಮಾಡಿದ್ಮೇಲೆ ಎಸ್ಐಟಿ ಯವರು ತ್ವರಿತವಾಗಿ ತನಿಖೆ ಮಾಡ್ತಿದ್ದಾರೆ. 34 ಕೋಟಿ ನಗದನ್ನು ರಿಕವರಿ ಮಾಡಿದ್ದಾರೆ ಎಂದರು.