ರಾಯಚೂರು: ಹಲ್ಲಿ ಬಿದ್ದ ಊಟವನ್ನು ಸೇವಿಸಿ 40 ಮಕ್ಕಳು ಅಸ್ವಸ್ಥವಾಗಿರುವ ಘಟನೆ ರಾಯಚೂರಿನ ಚಂದ್ರಬಂಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. 40 ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳಿಗೆ ಫುಡ್ ಪಾಯ್ಸನ್ ಆಗಿದೆ ಎನ್ನಲಾಗಿದೆ.
Advertisement
ಬೆಳಿಗ್ಗೆ ಪುಲಾವ್ ತಿಂದಿದ್ದ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಾಣಿಸಿತ್ತು. ತಿಂಡಿ ತಿಂದಾದ ನಂತರ ಅವರಲ್ಲಿ ವಾಂತಿ, ಬೇಧಿ, ತಲೆ ನೋವು, ಹೊಟ್ಟೆನೋವು ಕಾಣಿಸಿಕೊಂಡಿತ್ತು. ಕೆಲವು ಮಕ್ಕಳಲ್ಲಿ ತಲೆ ತಿರುಗುವಿಕೆ ಕಾಣಿಸಿತ್ತು. ವಸತಿ ಶಾಲೆಯಲ್ಲಿ ಪುಲಾವ್ ತಯಾರಿಸುವ ವೇಳೆ ಅದಕ್ಕೆ ಹಲ್ಲಿ ಬಿದ್ದಿತ್ತು ಎನ್ನಲಾಗುತ್ತಿದೆ.