ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್.!

0
Spread the love

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಹೌದು ಕೆಲಸ ಬಯಸಿ ಬೆಂಗಳೂರಿಗೆ ಬಂದು ಕೋರಮಂಗಲ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯೊಂದ್ರಲ್ಲಿ ಜಾಬ್ ಮಾಡ್ತಿದ್ಲು..ಹತ್ತಿರವೇ ಪಿಜಿಯಲ್ಲಿ ವಾಸವಾಗಿದ್ಲು.. ಹೀಗೆ ಭವಿಷ್ಯದ ಬಗ್ಗೆ ಸುಂದರ ಸ್ವಪ್ನಗಳನ್ನ ಕಂಡಿದ್ದ ಯುವತಿ ಕೃತಿ, ಕುಟುಂಬವನ್ನು ಬಿಟ್ಟು ಒಂಟಿಯಾಗಿ ಲೇಡೀಸ್ ಪಿಜಿಯಲ್ಲಿ ವಾಸವಾಗಿದ್ಲು..ಆದ್ರೆ ನೆನ್ನೆ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಕೃತಿ ಪಿಜಿಯೊಳಗೆ ಹೋಗಿದ್ದಾಳೆ..ಆಗ ಹಿಂದೆಯೇ ಹೋದ ಯುವಕನೊಬ್ಬ ಚಾಕುವಿಂದ ಆಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ..ಕೂಡಲೇ ಕೋರಮಂಗಲ ಪೊಲೀಸ್ರು ಸ್ಥಳಕ್ಕೆ ದೌಡಾಯಿಸಿದ್ದಾರೆ..

ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ. ಕೊರಮಂಗಲ ಪೊಲೀಸರು ಸದ್ಯ ಆರೋಪಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಕೃತಿ ಪಿಜಿಗೆ ಸೇರಿದ್ದರು. ಆಕೆ ಪಿಜಿಗೆ ಆಗಮಿಸುವ ವೇಳೆಯೂ ಈ ಯುವಕ ಲಗೇಜ್‌ ತೆಗದುಕೊಂಡು ಬಂದಿದ್ದ. ಆಗ ಯುವಕನನ್ನು ಒಳ ಬಿಡುವುದಿಲ್ಲ ಎಂದು ಪಿಜಿ ಸೆಕ್ಯೂರಿಟಿ ತಡೆದಿದ್ದರು. ಪಿಜಿ ಸೆಕ್ಯುರಿಟಿ ಬಳಿ, ಆತ ತನ್ನ ಸಹೋದರ ಎಂದು ಹೇಳಿ ಬೇಗ ಕಳುಹಿಸುತ್ತೇನೆ ಎಂದು ಕೃತಿ ಒಳ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಹೀಗೆ ಮಾಹಿತಿ ತಿಳಿದ ಕೋರಮಂಗಲ ಪೊಲೀಸ್ರು ಸ್ಥಳದಲ್ಲೇ ಸಾವನ್ನಪ್ಪಿದ್ದ ಕೃತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಂಬುಲೆನ್ಸ್ ನಲ್ಲಿ ರಾತ್ರಿಯೇ ಶಿಫ್ಟ್ ಮಾಡಿದ್ದಾರೆ..ಹೀಗಿರುವಾಗ್ಲೇ ಪಿಜಿಯಲ್ಲಿಯೇ ಯುವತಿ ಹತ್ಯೆ ವಿಚಾರ ತಿಳಿದು ಡಿಸಿಪಿ ಸಾರಾ ಫಾತಿಮಾ ಕೂಡಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ..ಹೀಗೆ ಏರಿಯಾದ ಸುತ್ತಲೂ ಸಿಸಿಟಿವಿಗಳನ್ನ ಸಂಗ್ರಹಿಸಿರೋ ಪೊಲೀಸ್ರು ಆರೋಪಿಗಾಗಿ ಹುಡುಕಾಟ ನಡೆಸ್ತಿದ್ದಾರೆ..

ಪಿಜಿ ಒಳಗೆ ರೂಮ್ ಬಳಿಯೇ ಯುವಕನೋರ್ವ ಯುವತಿಯನ್ನ ಹತ್ಯೆ ಮಾಡಿದ್ದು, ಆ ಏರಿಯಾದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.. ಪಿಜಿಗೆ  ಬಯೋಮೆಟ್ರಿಕ್ ಪದ್ದತಿ ಇದ್ದು, ಒಳ ಹೋಗಲು ಥಮ್ಸ್ ಮಾಡಲೇಬೇಕು..ಆದ್ರೆ ಯುವಕ ಒಳಗೆ ಹೇಗೆ ಹೋದ ಅನ್ನೋದು ಅನುಮಾನಕ್ಕೆ ಕಾರಣವಾಗಿದೆ..ಇನ್ನು ಪಿಜಿಗಳಲ್ಲಿ ಈ ರೀತಿಯ ಘಟನೆಗಳು ಮೊದಲೇನಲ್ಲ..

ಆಗಾಗ ಗಲಾಟೆ,ಕೊಲೆಯತ್ನ, ವಿಡಿಯೋ ರೆಕಾರ್ಡ್ ಈ ರೀತಿ ಘಟನೆಗಳು ಮರುಕಳಿಸ್ತಲೇ ಇರುತ್ತೆ..ಯುವತಿಯರ ಪಿಜಿಗೆ ಬರುವ ವ್ಯಕ್ತಿಗಳನ್ನ ಪರಿಶೀಲನೆ ಮಾಡಬೇಕು..ಐಡಿ ಚೆಕ್ ಮಾಡ್ಬೇಕು..ಪಿಜಿಯಲ್ಲಿರೋರು ತಮ್ಮವರು ಎಂದು ಕನ್ಫರ್ಮ್ ಮಾಡಬೇಕು..ವ್ಯಕ್ತಿಯನ್ನ ಚೆಕ್ ಮಾಡಿ ಒಳಬಿಡಬೇಕಿದೆ..ಸದ್ಯ ಪಿಜಿ ಮಾಲೀಕರದ್ದು ಮೇಲ್ನೋಟಕ್ಕೆ ನಿರ್ಲಕ್ಷ್ಯ ಕಂಡುಬಂದಿದೆ.. ಇನ್ನು ಆರೋಪಿಗಾಗಿ ಪೊಲೀಸ್ರು ಮೂರು ತಂಡಗಳಾಗಿ ಹುಡುಕಾಟ ನಡೆಸ್ತಿದ್ದಾರೆ..

 


Spread the love

LEAVE A REPLY

Please enter your comment!
Please enter your name here