ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ

0
JDS workers demand dismissal of Congress government
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಭ್ರಷ್ಟಾಚಾರಿ ಹಾಗೂ ಜನವಿರೋಧಿ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಜೆಡಿಎಸ್ (ಜಾ) ಕಾರ್ಯಕರ್ತರು ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ, ಶಿರಹಟ್ಟಿ ತಾಲೂಕಾ ಸಂ.ಕಾರ್ಯದರ್ಶಿ ಡಾ. ಶರಣಪ್ಪ ಹೂಗಾರ, ತಾಲೂಕಾಧ್ಯಕ್ಷ ಪ್ರವೀಣ ಬಾಳಿಕಾಯಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಕಳೆದ ಒಂದು ವರ್ಷದಿಂದ ಗ್ಯಾರಂಟಿಯ ನೆಪ ಮಾಡಿಕೊಂಡು ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ. ಕಾನೂನು ಸುವ್ಯವಸ್ಥೆ ಹದಗೆಗಟ್ಟಿದೆ. ನಿತ್ಯ ಕೊಲೆ-ಸುಲಿಗೆಗಳು ನಡೆಯುತ್ತಿವೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ.ಗಳ ಹರಗಣ, ಮೂಡಾ ನಿವೇಶನ ಹಗರಣಗಳನ್ನು ನೋಡಿದರೆ ಸರಕಾರ ಭ್ರಷ್ಟಾಚಾರದಲ್ಲಿ ಮುಳಗಿರುವುದು ಎದ್ದು ಕಾಣುತ್ತಿದೆ.

ಇದಕ್ಕೂ ಮೊದಲು ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದಿಂದ ಕಾಂಗ್ರೇಸ್ ಸರಕಾರದ ವಿರುದ್ದ ಘೋಷಣೆ ಕೂಗುತ್ತಾ, ಬಸವೇಶ್ವರ ವೃತ್ತ, ನೆಹರು ವೃತ್ತದ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಿದ್ದಲಿಂಗಯ್ಯ ಹೊಂಬಾಳಿಮಠ, ಶಿವಯ್ಯ ಬಾಳಿಹಳ್ಳಿಮಠ, ಎಂ.ಕೆ. ಕೊಟ್ಟಿಮಠ, ದೇವಪ್ಪ ಮಲಸಮುದ್ರ, ಮೌಲಾಹುಸೇನ ತಂಬೂಲಿ, ರಾಯಸಾಬ ಢಾಲಾಯತ, ಹನುಮಂತಪ್ಪ ಮರಿಗೌಡ್ರ, ಜೋಗೆಪ್ಪ ಆದಿ, ಲಲಿತಾ ಕಲ್ಲಪ್ಪನವರ, ಬಾದಶಾ ಭಾಗವಾನ, ರಾಜೇಸಾಬ ಢಾಲಾಯತ, ವಿನಾಯಕ ಪರಬತ, ವಾಯ್.ಡಿ. ಹೂಗಾರ, ಎಂ.ಎಂ. ಪಾಟೀಲ, ವೀರೇಶ ಬಣಗಾರ, ಬಸಪ್ಪ ಬಳ್ಳಾರಿ, ಮಮ್ಮದ ಇಸಾಕ, ಮಾಬುಸಾಬ ಮಜ್ಜೂರ, ಫಕ್ಕೀರಪ್ಪ ತುಳಿ, ಅಭಿಷೇಕ ಕಂಬಳಿ, ಮರಿಯಪ್ಪ ಬಳ್ಳಾರಿ, ರೇಖಾ ಬೆಂತೂರ, ಮಲ್ಲು ಮಲ್ಲಸಮುದ್ರ, ರೇಖಾ ಬೆಂತೂರ, ಮಮ್ಮದಲಿ ಮುಳಗುಂದ, ಅಲ್ಲಾಭಕ್ಷಿ ಮುಳಗುಂದ, ಸಾಗರ ಮುಂಡರಗಿ, ಜಯರಾಜ ವಾಲಿ, ಅಭಿಷೇಕ ಕಂಬಳಿ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಶಿರೂರ ಬಳಿ ಗುಡ್ಡ ಕುಸಿತದ ಸ್ಥಳ ವೀಕ್ಷಣಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆಗಮಿಸಿದರೆ ಅದನ್ನು ಸಹಿಸದ ಕಾಂಗ್ರೆಸ್ ನಾಯಕರು ವಿನಾಕಾರಣ ಟೀಕಿಸುತ್ತಿದ್ದಾರೆ. ಎಚ್‌ಡಿಕೆ ಬಂದು ಹೋದ ಮೇಲೆ ರಾಜ್ಯ ನಾಯಕರು ಸ್ಥಳಕ್ಕೆ ತೆರಳುತ್ತಿದ್ದಾರೆ. ಹೀಗಾಗಿ ಜನ ವಿರೋಧಿ ಆಗಿರುವ ಈ ಸರ್ಕಾರದ ವಿರುದ್ಧ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿಯಲ್ಲಿ ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here