ವಿಜಯಸಾಕ್ಷಿ ಸುದ್ದಿ, ಗದಗ : ಸಮೀಪದ ನಾಗಾವಿ ತಾಂಡಾ ಕಪ್ಪತ್ತುಗುಡ್ಡಕ್ಕೆ ಹೊಂದಿಕೊಂಡಿರುವ ದಕ್ಷಿಣದ ಕಾಶಿ ಜಲಾಶಂಕರದಲ್ಲಿ ಗುರುಪೂರ್ಣಿಮಾ ಕಡ್ಲಿಗಡಬ ಹುಣ್ಣಿಮೆಯಂದು ಜಲಾಶಂಕರನಿಗೆ ಅಭಿಷೇಕ ಹಾಗೂ ಬಿಲ್ವಾರ್ಚನೆ ಮಹಾಮಂಗಳರಾತಿ ಅದ್ದೂರಿಯಾಗಿ ನೆರವೇರಿತು.
Advertisement
ಅಭಿಷೇಕ ಭಕ್ತಿಸೇವೆಯನ್ನು ರಾಘವೇಂದ್ರಸಾ ಬಾಳಾಸಾ ಮೆರವಾಡೆ, ಶ್ರೀಕಾಂತಸಾ ಮೇರವಾಡೆ, ವಿಷ್ಣು ಕಲಘಟಗಿ, ಸೋಮಶೇಖರ ಚಪ್ಪನಮಠ, ಶ್ರೀಶೈಲ ಅಜನಾಳ, ಮಂಜುನಾಥ ಗದಗಿನ, ಡಾ. ರಾಜಶೇಖರ ಬಳ್ಳಾರಿ, ಮಹಾಂತೇಶ ನಿಮ್ಮನಗುಂದಿಮಠ, ಶ್ರೀ ಸಿಂದ್ಯಾ ಗದಗ, ಸುರೇಶ ಬೂಜಪ್ಪ ಗುಡಿಮನಿ, ಜಲಾಶಂಕರ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಗಣೇಶ ಪಾಂಡಪ್ಪ ಲಮಾಣಿ ಹಾಗೂ ಸರ್ವ ಸದಸ್ಯರು ಹಾಗೂ ಸುತ್ತಮುತ್ತಲಿನ ಜಲಾಶಂಕರ ಭಕ್ತಾಧಿಗಳು ಪಾಲ್ಗೊಂಡಿದ್ದರು. ಪೂಜಾ ವಿಧಿ ವಿಧಾನವನ್ನು ಅರ್ಚಕರಾದ ಮಲ್ಲಯ್ಯಸ್ವಾಮಿ ಅಂಗಡಿ (ಹಿರೇಮಠ) ನೆರವೇರಿಸಿದರು.